January20, 2026
Tuesday, January 20, 2026
spot_img

ನಾನು ಬಿಜೆಪಿ ಕಾರ್ಯಕರ್ತ ಅಷ್ಟೆ, ನಬಿನ್‌ ನನ್ನ ಬಾಸ್‌ ಎಂದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿತಿನ್ ನಬಿನ್ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ ಎಂದು ಹೇಳಿದ್ದಾರೆ.

ಬಿಜೆಪಿ ಒಂದು ಸಂಸ್ಕೃತಿ. ಬಿಜೆಪಿ ಒಂದು ಕುಟುಂಬ. ಇಲ್ಲಿ, ನಮ್ಮ ಸಂಬಂಧಗಳು ಸದಸ್ಯತ್ವವನ್ನು ಮೀರಿವೆ. ನಮ್ಮ ಅಧ್ಯಕ್ಷರು ಬದಲಾಗುತ್ತಾರೆ, ಆದರೆ ನಮ್ಮ ಆದರ್ಶಗಳು ಬದಲಾಗುವುದಿಲ್ಲ.

ನಾಯಕತ್ವ ಬದಲಾಗುತ್ತದೆ, ಆದರೆ ನಿರ್ದೇಶನ ಒಂದೇ ಆಗಿರುತ್ತದೆ. ಇಂದು ದೇಶದ ಪ್ರತಿಯೊಂದು ಮೂಲೆಯ ಜನರು ಬಿಜೆಪಿಯೊಂದಿಗೆ ಇದ್ದಾರೆ, ಬಿಜೆಪಿಗೆ ಸೇರುತ್ತಿದ್ದಾರೆ. ನಿತಿನ್ ನಬಿನ್ ಅವರಿಗೆ ಯುವ ಶಕ್ತಿ ಮತ್ತು ಸಂಘಟನೆಯಲ್ಲಿ ಕೆಲಸ ಮಾಡುವ ದೀರ್ಘ ಅನುಭವವಿದೆ, ಇದು ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತರಿಗೂ ಉಪಯುಕ್ತವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಮುಂದಿನ 25 ವರ್ಷಗಳು ಬಹಳ ಮುಖ್ಯ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಬೇಕಾದ ಅವಧಿ ಇದು ಎಂದಿದ್ದಾರೆ.

Must Read