ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಮ್ಮನ್ನು ಕಣ್ಣಾರೆ ಕಂಡು, ನಿಮ್ಮ ಜೊತೆ ಕೆಲ ಸಮಯ ಕಳೆದಿದ್ದೇನೆ, ಇದು ನನ್ನ ಅದೃಷ್ಟ ಎಂದು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಟಾಟಾ ನಿವಾಸಕ್ಕೆ ಸಚಿನ್ ಭೇಟಿ ನೀಡಿದ್ದು, ರತನ್ ಅವರ ಅಂತಿಮ ದರುಶನ ಪಡೆದಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಟಾಟಾ ಅವರ ಜೊತೆ ಕಳೆದ ದಿನದ ಫೋಟೊವೊಂದನ್ನು ಶೇರ್ ಮಾಡಿ ಭಾವುಕ ಸಂದೇಶ ಬರೆದಿದ್ದಾರೆ
ಅವರೊಂದಿಗೆ ನಾನು ಸಮಯ ಕಳೆಯುವುದಕ್ಕೆ ಅವಕಾಶ ಸಿಕ್ಕಿದೆ. ಇದರಿಂದ ನಾನು ಅದೃಷ್ಟಶಾಲಿಯಾಗಿದ್ದೇನೆ. ಆದರೆ ಅವರನ್ನ ಭೇಟಿಯಾಗದ ಲಕ್ಷಾಂತರ ಜನರು ಅನುಭವಿಸುವ ದುಃಖವನ್ನು ಇಂದು ನಾನೂ ಅನುಭವಿಸುತ್ತಿದ್ದೇನೆ. ಅಂತಹ ಪ್ರಭಾವಿ ವ್ಯಕ್ತಿ ಅವರು. ಟಾಟಾ ನೀವು ನಿರ್ಮಿಸಿದ ಸಂಸ್ಥೆಗಳು ಮತ್ತು ನೀವು ಸ್ವೀಕರಿಸಿದ ಮೌಲ್ಯಗಳ ಮೂಲಕ ನಿಮ್ಮ ಪರಂಪರೆಯು ಮುಂದುವರಿಯುತ್ತದೆ ಎಂದು ಬರೆದುಕೊಂಡಿದ್ದಾರೆ.