ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ ಸಿನಿಮಾದ ಯಶಸ್ಸಿನ ನಂತರ ರಿಷಭ್ ಶೆಟ್ಟಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ ಇನ್ನು ಮನೆಗೆ ಹೋಗಲು ಆಗೇ ಇಲ್ಲ ಎಂದು ಹೇಳಿದ್ದರು. ಜೊತೆಗೆ ಮಗಳು ರಾಧ್ಯರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದರು.
ಇದೀಗ ಮಗಳು ರಾಧ್ಯ ಜೊತೆ ಇರುವಫೋಟೊವೊಂದನ್ನು ರಿಷಭ್ ಶೇರ್ ಮಾಡಿದ್ದು, ಮುದ್ದಾದ ಎಲ್ಲಾ ಫೋಟೊ ಎಲ್ಲಾ ಕಡೆ ವೈರಲ್ ಆಗಿದೆ. ಪ್ರಗತಿ ಹಾಗೂ ರಿಷಭ್ ಶೆಟ್ಟಿಗೆ ಎರಡನೇ ಮಗು ರಾಧ್ಯ ಆಗಿದ್ದು, ಮುದ್ದಿನ ಮಗಳ ಫೋಟೊ ಶೇರ್ ಮಾಡಿ ನಾನು ನನ್ನ ಮಗಳು ಎನ್ನುವ ಕ್ಯಾಪ್ಷನ್ ಹಾಕಿದ್ದಾರೆ.