ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಸ್ಟರ್ ಆನಂದ್ ಪುತ್ರಿ, ಬಾಲನಟಿ ವಂಶಿಕಾ ಹೆಸರಿನಲ್ಲಿನ ವಂಚನೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು,ಆರೋಪಿ ನಿಶಾ ನರಸಪ್ಪ ಸುದ್ದಿಗೋಷ್ಠಿ ಕರೆದು ವಂಶಿಕಾ ಅವರ ತಾಯಿ ಯಶಸ್ವಿನಿ ಬಗ್ಗೆ ನೇರಾನೇರ ಆರೋಪಗಳನ್ನು ಮಾಡಿದ್ದಾರೆ.
ವಂಶಿಕಾ ಹೆಸರಿನಲ್ಲಿ ವಂಚನೆ ಎಸಗಿದ್ದಾರೆ ಎಂಬ ಪ್ರಕರಣದಲ್ಲಿ ಆರೋಪಿಯಾಗಿ ಜೈಲುಪಾಲಾಗಿದ್ದ ನಿಶಾ ನರಸಪ್ಪ ಅಲ್ಲಿಂದ ಇಂದು ಹೊರಬರುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ್ದಾರೆ.
ಮಾಸ್ಟರ್ ಆನಂದ್ ಅವರ ಮಗಳಿಂದ ನಾನೇನು ಬದುಕಿಲ್ಲ, ಇನ್ನು ವಂಶಿಕಾ ಅವರ ತಾಯಿ ಯಶಸ್ವಿನಿ ಯಾವ ಕಾರ್ಯಕ್ರಮಕ್ಕೂ ಮಗಳನ್ನು ಪುಗ್ಸಟ್ಟೆ ಕಳಿಸಲ್ಲ ಎಂದು ಹೇಳಿದ್ದಾರೆ.
ಯಶಸ್ವಿನಿಗೂ ನಮಗೂ ಒಂದು ವರ್ಷದಿಂದ ಪರಿಚಯ, ಅವರು ಪ್ರಮೋಷನ್ಗಾಗಿ ಬರುತ್ತಿದ್ದರು. ಅವರಿಗೆ ಸ್ವಲ್ಪ ಹಣ ಕೊಡಬೇಕಾಗಿತ್ತು, ಸ್ವಲ್ಪ ಕೊಟ್ಟಿದ್ದೇನೆ. ಇದಕ್ಕೆ ಸಂಬಂಧಿಸಿದ ಪೋಟೋಗಳು ಇವೆ. ಆದರೆ ನನಗೆ ಅವರಿಗೆ ಪರಿಚಯ ಇಲ್ಲ ಅನ್ನುವಂತೆ ತೋರಿಸಿಕೊಂಡ್ರು. ಯಶಸ್ವಿನಿಯವರು ಪುಗ್ಸಟ್ಟೆ ಯಾವುದೇ ಇವೆಂಟ್ಗೆ ಬಂದಿರಲಿಲ್ಲ. ಪ್ರತಿಯೊಂದಕ್ಕೂ ಹಣ ಪಡೆದೇ ಬಂದಿದ್ದಾರೆ. ಇದನ್ನ ನಾನು ಹೊರಗೆ ಹೇಳಬಾರದಾ? ನನ್ನ ಪ್ರೊಡಕ್ಷನ್ ಕಂಪನಿಗೆ ಏಳು ವರ್ಷ, ವಂಶಿಕಾಗೆ ಐದು ವರ್ಷ. ನಾನು ಇವರ ಮಗಳಿಂದಲೇನಾ ಬದುಕಿರೋದು? ಅವರು ಪ್ರತಿ ವಾಹಿನಿಯಲ್ಲೂ ಹಣ ಪಡೆದೇ ಭಾಗವಹಿಸುತ್ತಿರುವುದು ಎಂದು ಯಶಸ್ವಿನಿ ವಿರುದ್ಧ ನಿಶಾ ಆರೋಪ ಹೊರಿಸಿದ್ದಾರೆ.
ಏಳು ವರ್ಷಗಳಿಂದ ಎನ್.ಎನ್.ಪ್ರೊಡಕ್ಷನ್ ಅಂತ ಕಂಪನಿ ನಡೆಸುತ್ತಿದ್ದೇನೆ. ಅದರ ಮೂಲಕ ನಾನು ಸಾಕಷ್ಟು ಇವೆಂಟ್ ಮಾಡಿದ್ದು, ನನ್ನ ಕಂಪನಿಗೆ ಒಂದೂ ಕಪ್ಪುಚುಕ್ಕೆ ಇರಲಿಲ್ಲ. ನನ್ನ ಕಂಪನಿಗೆ ಹರ್ಷಿತಾ ಅಂತ ಒಂದು ಹುಡುಗಿಯನ್ನು ಕೆಲಸಕ್ಕೆ ತಗೊಂಡೆ, ಆಕೆಯ ಫ್ಯಾಮಿಲಿ ನನಗೆ ತುಂಬಾ ಕ್ಲೋಸ್ ಆಗಿತ್ತು. ಅವರು ಸುಮಾರು ಎರಡು ವರ್ಷ ನನ್ನ ಜೊತೆಯೇ ಇದ್ದರು. ಅವರಿಗೆ ನನ್ನ ಎಲ್ಲ ಬ್ಯಾಂಕ್ ಡಿಟೇಲ್ಸ್ ಗೊತ್ತಿತ್ತು. ಬಳಿಕ ಅವರು ನನ್ನ ಕಂಪನಿಯಲ್ಲಿ ಶೇರ್ ಕೇಳಿದ್ರು, ಅದಕ್ಕೆ ನಾನು ಒಪ್ಪಲಿಲ್ಲ. ಆಗ ಅವರ ಐಫೋನ್ನಲ್ಲಿ ನನ್ನ ಇನ್ಸ್ಟಾಗ್ರಾಂ ಓಪನ್ ಮಾಡಿದ್ರು, ಅದನ್ನು ಪ್ರಶ್ನೆ ಮಾಡಿದ ಬಳಿಕ ಕೆಲಸ ಬಿಟ್ಟರು ಎಂದು ನಿಶಾ ಹೇಳಿದ್ದಾರೆ.
ಹರ್ಷಿತಾ ಕೆಲಸ ಬಿಟ್ಟ ಬಳಿಕ ನನಗೆ ತೊಂದರೆ ಆಗಲಿಕ್ಕೆ ಶುರುವಾಯ್ತು. ನನ್ನ ಕ್ಲೈಂಟ್ಸ್ ಮನೆ ಹತ್ತಿರ ಬರಲು ಶುರು ಮಾಡಿದ್ರು. ಅವರನ್ನು ಹರ್ಷಿತಾನೇ ಕಳಿಸುತ್ತಿದ್ದರು. ರೀತು ಅನ್ನೋರು ಗಲಾಟೆ ವಿಡೀಯೋ ನೀಡಿದ್ದಾರೆ, ಆದರೆ ಅವರ ಬಾಯ್ಫ್ರೆಂಡ್ ಬಂದು ಗಲಾಟೆ ಮಾಡಿದ್ದಾರೆ. ಈ ಟೈಮಲ್ಲಿ ಅವರು ಅದನ್ನ ಬಳಸಿಕೊಂಡಿದ್ದಾರೆ. ಯಶಸ್ವಿನಿಯವರು ಠಾಣೆಗೆ ಬಂದ್ರು, ಅವರು ಪರಿಚಯ ಇಲ್ಲ ಅನ್ನೋ ರೀತಿ ತೋರಿಸಿಕೊಂಡ್ರು, ಕಿರಚಾಡಿದ್ರು, ಕೂಗಾಡಿದ್ರು. ನಂತರ ಅವರು ಎಲ್ಲರಿಗೂ ರೀಫಂಡ್ ಕೊಡ್ತೀನಿ ಅಂದ್ರು. ಅವರು ಅವರು ನನ್ನ ಕಂಪನಿಯಲ್ಲ, ಆದ್ರೂ ಏನೇನೋ ಹೇಳಿದ್ರು ಅಂತ ನಿಶಾ ವಿವರಿಸಿದ್ದಾರೆ