ಹೊಸದಿಗಂತ ವರದಿ ಬಾಗಲಕೋಟೆ:
ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ ಹೈ ಕಮಾಂಡ ಅವಕಾಶ ಕೊಟ್ಟರೆ ಅದನ್ನು ನಿಭಾಯಿಸುವ ಸಾಮರ್ಥ್ಯ ಇದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಣ ಮುರಗೇಶ ನಿರಾಣಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಹೈ ಕಮಾಂಡ ಯಾರನ್ನೇ ರಾಜ್ಯ ಅಧ್ಯಕ್ಷ ಮಾಡಿದರೂ ಅದನ್ನು ಒಪ್ಪುತ್ತೇವೆ ಎಂದರು.
ಪಕ್ಷದಲ್ಲಿ ಅಲ್ಪಸ್ವಲ್ಪ ಅಸಮಾಧಾನ ಇದೆ. ಅದನ್ನು ಸರಿಪಡಿಸುವ ಕೆಲಸ ಪಕ್ಷದ ಮಟ್ಟದಲ್ಲಿ ನಡೆಯುತ್ತಿದೆ. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಯುವಕ ಇದ್ದಾರೆ ಇನ್ನೂ ಸ್ವಲ್ಪ ಅನುಭವ ಬೇಕಾಗುತ್ತದೆ. ಅಸಮಾಧಾನ ಹೊಂದಿದವರ ಬಳಿ ಹೋಗಿ ಮಾತನಾಡುವ ಕೆಲಸವನ್ನು ಸಹ ವಿಜಯೇಂದ್ರ ಮಾತನಾಡುತ್ತಾರೆ ಎಂದರು.
ನಮ್ಮ ಪಕ್ಷದ ಅಸಮಾಧನವೇ ದೊಡ್ಡದು ಮಾಡಿಕೊಂಡು ಹೋಗುವ ಬದಲು ಕಾಂಗ್ರೆಸ್ ದುರಾಡಳಿತ, ಭ್ರಷ್ಟಾಚಾರ ವಿರುದ್ದ ಹೋರಾಡುವ ಕೆಲಸ ನಮ್ಮ ನಾಯಕರು ಮಾಡಲು ಮುಂದಾಗಬೇಕಾಗಿದೆ.ನಾವೇ ಅಸಮಾಧಾನ ಹೊರಹಾಕಿಕೊಂಡು ಕೆಲಸ ಮಾಡಿದರೆ ಲಕ್ಷಾಂತರ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.
ರಾಜಕಾರಣದಲ್ಲಿ ಯಾರೂ ವೈರಿ ಇಲ್ಲ, ಶತ್ರು ಇಲ್ಲ, ನಮ್ಮ ಪಕ್ಷದಲ್ಲಿ ಎಲ್ಲರೂ ಒಂದಾಗಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಯೂ ಸಹ ಅಂತಹ ದೊಡ್ಡ ಭಿನ್ನಾಭಿಪ್ರಾಯ ಇಲ್ಲ , ನಮಗೆ ಯಾರೂ ಅನ್ಯಾಯ ಮಾಡಿಲ್ಲಅವರು ನನಗೆ ಯಾವ ಅನ್ಯಾಯ ಮಾಡಿಲ್ಲ. ನಮ್ಮ ಜಿಲ್ಲೆಯ ನಾಯಕರು ಸಹ ಒಂದಾಗಿದ್ದೇವೆ ಎಂದರು.
ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆಯೂ ಶೀಘ್ರ ನಡೆಯಲಿದೆ. ಎಂದರು.