ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಜಿತ್ ಪವಾರ್ (Ajit Pawar) ಬಂಡಾಯದ ಬಳಿಕ ಕುಗ್ಗಿದ್ದ ಶರದ್ ಪವಾರ್ ಮತ್ತೆ ಸಿಡಿದೆದಿದ್ದು, ವಾಜಪೇಯಿ ಮಾತನ್ನು ಉಲ್ಲೇಖಿಸಿ ನಾನು ದಣಿದಿಲ್ಲ, ನಿವೃತ್ತಿಯಾಗಿಲ್ಲ ಎಂದಿದ್ದಾರೆ.
ಶರದ್ ಪವಾರ್ ಅವರಿಗೆ ವಯಸ್ಸಾಗಿದೆ ಅವರಿನ್ನು ನಿವೃತ್ತಿ ಪಡೆಯಬಹುದು ಎಂಬ ಅಜಿತ್ ಪವಾರ್ ಸಲಹೆಗೆ ಪ್ರತಿಕ್ರಿಯಿಸಿದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರು ಪಕ್ಷದ ನಾಯಕತ್ವವನ್ನು ಅಡ್ವಾಣಿ ಅವರಿಗೆ ವರ್ಗಾಯಿಸಿದಾಗ ‘ನಾನು ದಣಿದಿಲ್ಲ, ನಿವೃತ್ತಿ ಹೊಂದಿಲ್ಲ.ಆದರೆ ಈಗ ಅಡ್ವಾಣಿ ನೇತೃತ್ವದಲ್ಲಿ ಗೆಲುವಿನತ್ತ ಮುನ್ನಡೆಯಬೇಕು ಎಂದು ಹೇಳಿದ್ದರು’ ಎಂದು ಶರದ್ ಪವಾರ್ ವಾಜಪೇಯಿ ಮಾತುಗಳನ್ನು ನೆನೆದಿದ್ದಾರೆ.
ತಮ್ಮ ಮಾವನ ಈಗ ನಿವೃತ್ತಿಯಾಗಬೇಕು ಎಂದು ಅಜಿತ್ ಪವಾರ್ ಸೂಚಿಸಿದ ನಂತರ ಶರದ್ ಪವಾರ್ ತಮ್ಮ ವಯಸ್ಸು, ಆರೋಗ್ಯ ಸ್ಥಿತಿ ಹೆಚ್ಚು ಚರ್ಚೆಯಲ್ಲಿದೆ ಎಂದಿದ್ದಾರೆ.
,ನನ್ನ ವಯಸ್ಸು 82 ಅಥವಾ 92 ಆಗಿರಲಿ ನಾನು ಇನ್ನೂ ಚುರುಕಾಗಿಯೇ ಇದ್ದೇನೆ ಎಂದು ಹೇಳಿದ್ದರು. ಶನಿವಾರ ತಮ್ಮ ಪಕ್ಷವನ್ನು ಪುನರ್ನಿರ್ಮಿಸುವ ಕೆಲಸವನ್ನು ಪ್ರಾರಂಭಿಸಿದ ಪವಾರ್, “ಮೊರಾರ್ಜಿ ದೇಸಾಯಿ ಅವರು ಯಾವ ವಯಸ್ಸಿನಲ್ಲಿ ಪ್ರಧಾನಿಯಾದರು ಎಂದು ನಿಮಗೆ ತಿಳಿದಿದೆಯೇ? ನನಗೆ ಪ್ರಧಾನಿ ಅಥವಾ ಮಂತ್ರಿಯಾಗಲು ಇಷ್ಟವಿಲ್ಲ. ನಾನು ಜನರ ಸೇವೆ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.