ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆ ಹಿನ್ನೆಲೆ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಇದರ ನಡುವೆ ನಾನು ಚರ್ಚೆಗೆ ಸಿದ್ಧ, ಪ್ರಧಾನಿ ಮೋದಿ ಬರ್ತಾರಾ ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ಬುದ್ದಿಜೀವಿಗಳು ಬರೆದ ಪತ್ರವನ್ನು ಉಲ್ಲೇಖಿಸಿ ಮಾತನಾಡಿದ ರಾಹುಲ್ ಗಾಂಧಿ, ನಾನು ಮತ್ತು ಮೋದಿ ಬಹಿರಂಗವಾಗಿ ಚರ್ಚೆ ನಡೆಸಬೇಕು ಎಂದಿದ್ದಾರೆ. ಈ ಕುರಿತು ಪ್ರಧಾನಿಗಳಿಗೂ ಪತ್ರ ಬರೆಯಲಾಗಿದೆ. ನಾನು ಚರ್ಚೆಗೆ ಸಿದ್ಧನಿದ್ದೇನೆ. ಎಲ್ಲಿ ಬೇಕಾದ್ರೂ ಚರ್ಚೆ ನಡೆಸಬಹುದು. ನಾನು ಬರಲು ಸಿದ್ಧನಿದ್ದೇನೆ. ಆದರೆ ಮೋದಿ ಬರ್ತಾರಾ ಎಂದು ಜನರನ್ನು ರಾಹುಲ್ ಗಾಂಧಿ ಪ್ರಶ್ನೆ ಮಾಡಿದರು.
ಒಂದು ವೇಳೆ ಮೋದಿ ಚರ್ಚಗೆ ಬಂದ್ರೆ ಅದಾನಿಗೂ ನಿಮಗೂ ಏನು ಸಂಬಂಧ ಅನ್ನೋದು ನನ್ನ ಮೊದಲ ಪ್ರಶ್ನೆ ಆಗಿರುತ್ತದೆ. ನಂತರ ಚುನಾವಣಾ ಬಾಂಡ್ ಕುರಿತ ಪ್ರಶ್ನೆ ಇರುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.
ಕೊರೋನಾದಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಚಪ್ಪಾಳೆ ತಟ್ಟುವಂತೆ ಹೇಳಿದ್ದು ಯಾಕೆ? ಚೀನಾದ ಅತಿಕ್ರಮಣ, ಅಗ್ನಿಫಥ್ ಯೋಜನೆಗಳ ಬಗ್ಗೆ ನಾನು ಪ್ರಧಾನಿ ಮೋದಿ ಅವರನ್ನು ಕೇಳುತ್ತೇನೆ. ಮೋದಿ ಉತ್ತರಿಸಲಾಗದ ಹಲವು ಪ್ರಶ್ನೆಗಳು ನನ್ನ ಬಳಿಯಲ್ಲಿವೆ ಎಂದರು.