June 28, 2026
Sunday, June 28, 2026
spot_img

ಹೈಕಮಾಂಡ್ ಆಶೀರ್ವಾದ ಇರೋವರೆಗೂ ನಾನೇ ಬಾಸ್: ಸದನದಲ್ಲಿ ಸಿದ್ದು ಖಡಕ್ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಅಂದ್ರೆ ಬರೀ ಅಂಕಿ-ಅಂಶ ಅಂದುಕೊಂಡ್ರಾ? ಖಂಡಿತ ಇಲ್ಲ. ಅಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ವಿರೋಧ ಪಕ್ಷಗಳ ನಡುವೆ ಸಖತ್ ‘ಪಂಚ್’ ಡೈಲಾಗ್‌ಗಳು ವಿನಿಮಯವಾಗಿವೆ.

ಡಿಕೆಶಿ ಅವರ ಮುಂದಿನ ನಡೆ ಮತ್ತು ಸ್ಪೀಕರ್ ಖಾದರ್ ಅವರ ಫೋಟೋ ಸೆಷನ್ ವಿಚಾರ ಇಟ್ಟುಕೊಂಡು ವಿಪಕ್ಷಗಳು ಸಿಎಂ ಕಾಲೆಳೆಯಲು ಶುರು ಮಾಡಿದವು. ಅದಕ್ಕೆ ತಮ್ಮದೇ ಸ್ಟೈಲ್‌ನಲ್ಲಿ ತಿರುಗೇಟು ಕೊಟ್ಟ ಸಿದ್ದರಾಮಯ್ಯ, “ಹೈಕಮಾಂಡ್ ಎಲ್ಲಿಯವರೆಗೆ ಇರು ಅಂತಾರೋ, ಅಲ್ಲಿಯವರೆಗೆ ನಾನೇ ಮುಖ್ಯಮಂತ್ರಿ” ಎಂದು ಸ್ಪಷ್ಟಪಡಿಸಿದರು.

“ನಮ್ಮಲ್ಲಿರೋ ಶಾಸಕರೆಲ್ಲರೂ ಅರ್ಹರೇ, ಯಾರೇ ಸಿಎಂ ಆದ್ರೂ ನನಗೆ ಖುಷಿನೇ, ಹೈಕಮಾಂಡ್ ಹೇಳೋವರೆಗೂ ಖಾದರ್ ಅವರೇ ಸ್ಪೀಕರ್. ಅವರು ಸಚಿವರಾದ್ರೂ ನನಗೆ ಸಂತೋಷವೇ” ಎಂದು ಸಿದ್ದರಾಮಯ್ಯ ಅವರು ನಗುನಗುತ್ತಲೇ ಟಾಂಗ್ ಕೊಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !