ಹೊಸದಿಗಂತ ಡಿಜಿಟಲ್ ಡೆಸ್ಕ್:
ಜವಾನ್ ಸಿನಿಮಾದ ಸಕ್ಸಸ್ ಎಂಜಾಯ್ ಮಾಡುತ್ತಿರುವ ತಮಿಳು ನಟ ವಿಜಯ್ ಸೇತುಪತಿ ಸದ್ಯ ಮುಂದಿನ ಚಿತ್ರದತ್ತ ಮುಖಮಾಡಿದ್ದಾರೆ.
ಆದ್ರೆ ಈ ಚಿತ್ರದಲ್ಲಿ ನಾಯಕರಾಗಿ ನಟಿಸಲಿರುವ ವಿಜಯ್ ಸೇತುಪತಿ, ನಾಯಕಿ ಪಾತ್ರಧಾರಿ ಕೃತಿ ಶೆಟ್ಟಿ ಎಂದು ಗೊತ್ತಾಗುತ್ತಿದ್ದಂತೆ ಈ ಆಫರ್ ನಿರಾಕರಿಸಿದ್ದಾರೆ. ‘ನಾನು ಈ ಚಿತ್ರದಲ್ಲಿ ನಟಿಸಲಾರೆ’ ಎಂದುಬಿಟ್ಟಿದ್ದಾರೆ.
ಒಮ್ಮೆ ಮಗಳೆಂದು ಕಲ್ಪಿಸಿಕೊಂಡು ಪಾತ್ರ ಮಾಡಿದ ಮೇಲೆ ನಾನು ಅದೇ ನಟಿಯೊಂದಿಗೆ ಹೇಗೆ ಲವ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳಲಿ? ಆಕೆಯೊಂದಿಗೆ ರೊಮ್ಯಾನ್ಸ್ ಮಾಡಲು ನನ್ನ ಮನಸ್ಸು ಒಪ್ಪುವುದಿಲ್ಲ ಎಂದಿದ್ದಾರೆ.
‘ಉಪ್ಪೇನ’ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದ ಶೂಟಿಂಗ್‌ನಲ್ಲಿ ನಾನು ‘ನನ್ನನ್ನು ನಿನ್ನ ತಂದೆಯ ಸ್ಥಾನದಲ್ಲಿ ಕಲ್ಪಿಸಿಕೋ ಎಂದು ಕೃತಿಗೆ ಹೇಳಿದ್ದೆ, ಆಕೆಗೆ ನನ್ನ ಮಗನಷ್ಟೇ ವಯಸ್ಸು. ನಾನು ನಟಿ ಕೃತಿಯನ್ನು ನನ್ನ ಮಗಳೆಂದು ಭಾವಿಸಿದ್ದೇನೆ. ಅವಳೊಂದಿಗೆ ರೊಮ್ಯಾನ್ಸ್ ಸೀನ್ಸ್ ಮಾಡುವುದನ್ನು ನಾನು ಕಲ್ಪಿಸಿಕೊಳ್ಳಲೂ ಅಸಾಧ್ಯ’ ಎಂದಿದ್ದಾರೆ .
2021ರಲ್ಲಿ ಬಿಡುಗಡೆಯಾಗಿದ್ದ ‘ಉಪ್ಪೇನ’ ತೆಲುಗು ಸಿನಿಮಾದಲ್ಲಿ ನಟ ವಿಜಯ್ ಸೇತುಪತಿ ನಟಿ ಕೃತಿ ಶೆಟ್ಟಿಯ ಜತೆ ತೆರೆ ಹಂಚಿಕೊಂಡಿದ್ದರು. ಆದರೆ ಆ ಚಿತ್ರದಲ್ಲಿ ಅವರು ಕೃತಿಯ ತಂದೆಯ ಪಾತ್ರದಲ್ಲಿ ನಟಿಸಿದ್ದರು.
ವಿಜಯ್ ಸೇತುಪತಿ ಶಾರುಖ್ ಖಾನ್ ನಾಯಕತ್ವದ ಜವಾನ್ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.