ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ವಿಮಾನದಿಂದ ಜಂಪ್ ಮಾಡಲಿಲ್ಲ, ಬದಲಾಗಿ ಮುರಿದ ವಿಮಾನದ ಬಾಗಿಲಿನಿಂದ ನಡೆದುಕೊಂಡೇ ಬಂದೆ ಎಂದು ವಿಮಾನ ದುರಂತದಿಂದ ಪಾರಾದ ಏಕೈಕ ಪ್ರಯಾಣಿಕ ರಮೇಶ್ ವಿಶ್ವಾಸ್ ಕುಮಾರ್ ಕುತೂಹಲಕಾರಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ಎಮರ್ಜೆನ್ಸಿ ಡೋರ್ ಒಡೆದು ಹೋಗಿತ್ತು, ನನ್ನ ಸೀಟ್ ಕೂಡ ಒಡೆದು ಹೋಗಿತ್ತು. ಎಮರ್ಜೆನ್ಸಿ ಡೋರ್ ಮುರಿದಿತ್ತು. ಅದರಿಂದ ನಾನು ಹೊರಬಂದೆ. ನಾನು ಹೊರಬರುವಾಗ ಅಲ್ಪಸ್ವಲ್ಪ ಬೆಂಕಿ ಹೊತ್ತಿಕೊಂಡಿತ್ತು. ನಂತರ ಇಡೀ ವಿಮಾನ ಸುಟ್ಟು ಹೋಯಿತು. ನಾನು ನೆಲಮಹಡಿಯಲ್ಲಿ ಬಿದ್ದಿದ್ದೆ, ಅಲ್ಲಿಂದ ಪಾರಾದೆ ಎಂದರು.
ಅರ್ಧ ವಿಮಾನ ಕಟ್ಟಡದ ನೆಲಮಹಡಿಯಲ್ಲಿ ಇತ್ತು. ನಾನು ಹೊರಗಡೆ ಬಂದಾಗ ಅಲ್ಪ ಸ್ವಲ್ಪ ಬೆಂಕಿ ಹೊತ್ತಿಕೊಂಡಿತ್ತು. ತದನಂತರ ಬ್ಲಾಸ್ಟ್ ಆಯಿತು. ನೆಲಮಹಡಿಯಿಂದ ನಾನು ವಾಕ್ ಮಾಡಿಕೊಂಡೇ ಬಂದೆ. ಪ್ರಧಾನಮಂತ್ರಿ ಅವರು ಎಲ್ಲಾ ಓಕೆ ನಾ ಎಂದು ಮಾತನಾಡಿಸಿದರು. ನನ್ನ ಕುಟುಂಬ ಲಂಡನ್‌ನಲ್ಲಿ ಇದೆ. ನನ್ನ ಅಣ್ಣ ಭಾರತದಲ್ಲಿ ಇದ್ದಾನೆ ಎಂದು ಹೇಳಿದರು.