ನನ್ನ ಮೇಲೆ ಒಂದಲ್ಲ, ಸಾವಿರ ಕೇಸ್​ ಹಾಕಿದರೂ ನಾನು ಹೆದರಲ್ಲ: ​ಕೇಜ್ರಿವಾಲ್ ಗೆ ಸವಾಲು ಹಾಕಿದ ಬಗ್ಗಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೇಜಿಂದರ್​ ಪಾಲ್​ ಬಗ್ಗಾರನ್ನು ಜುಲೈ 5ರವರೆಗೆ ಬಂಧಿಸುವಂತಿಲ್ಲ ಎಂದು ಹೈಕೋರ್ಟ್​ ಆದೇಶ ನೀಡಿದ್ದ ಬೆನ್ನಲ್ಲೇ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ವಿರುದ್ಧ ಹರಿಹಾಯ್ದಿರುವ ಬಗ್ಗಾ,ನನ್ನ ಮೇಲೆ ಒಂದಲ್ಲ, ಸಾವಿರ ಕೇಸ್​ ಹಾಕಿದರೂ ನಾನು ಹೆದರಲ್ಲ ಎಂದು ಸವಾಲು ಹಾಕಿದ್ದಾರೆ.
ಹೈಕೋರ್ಟ್​ ಆದೇಶ ನೀಡಿದ ಬಳಿಕ ಮೊದಲ ಬಾರಿಗೆ ಮಾಧ್ಯಮಗೋಷ್ಟಿ ನಡೆಸಿದ ಬಗ್ಗಾ, ಗುರು ಗ್ರಂಥ ಸಾಹಿಬ್ ತ್ಯಾಗ ಪ್ರಕರಣ, ಡ್ರಗ್ಸ್​ ಮಾಫಿಯಾ ಮತ್ತು ಖಲಿಸ್ತಾನಿ ಪ್ರತ್ಯೇಕತಾವಾದಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದರು. ಕ್ರಮ ವಹಿಸದೇ ಇದ್ದುದನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಪಂಜಾಬ್ ಪೊಲೀಸರು ಭಯೋತ್ಪಾದಕನಂತೆ ಬಿಂಬಿಸಿ, ಬಂಧಿಸಿದ್ದರು ಎಂದು ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಟೀಕಿಸಿದ್ದಾರೆ.
ಡ್ರಗ್ಸ್​ ಮಾಫಿಯಾ ಮತ್ತು ಪ್ರತ್ಯೇಕತಾವಾದಿಗಳ, ಗುರು ಗ್ರಂಥ ಸಾಹಿಬ್ ಅವಮಾನಿಸಿದವರ ವಿರುದ್ಧ ಪಂಜಾಬ್​ ಸರ್ಕಾರ ಕ್ರಮ ವಹಿಸಿಲ್ಲ. ಇದನ್ನು ಕೇಳುವುದು ತಪ್ಪೇ?. ನನ್ನ ವಿರುದ್ಧ ಒಂದಲ್ಲ, ಸಾವಿರ ಪ್ರಕರಣಗಳನ್ನು ದಾಖಲಿಸಿದರೂ ಇದನ್ನು ನಾನು ಪ್ರಶ್ನಿಸದೇ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಜುಲೈ 5 ರವರೆಗೆ ಬಗ್ಗಾ ಅವರನ್ನು ಬಂಧಿಸದಂತೆ ಹರಿಯಾಣ ಮತ್ತು ಪಂಜಾಬ್ ಹೈಕೋರ್ಟ್ ಮಂಗಳವಾರ ಪಂಜಾಬ್ ಪೊಲೀಸರಿಗೆ ನಿರ್ದೇಶನ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!