ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನನ್ನು ದುರಹಂಕಾರಿ ಅಂದ್ರು ಐ ಡೋಂಟ್ ಕೇರ್, ನಾನು ಸ್ವಾಭಿಮಾನಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ, ಶಾಖಾಮಠ, ಕೇತೋಹಳ್ಳಿ ಬೆಂಗಳೂರಿನ ಭಕ್ತ ಭಂಡಾರದ ಕುಟೀರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಮ್ಮ ಸಮುದಾಯದವರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ವಿದ್ಯಾವಂತರಾದರೆ ಸ್ವಾಭಿಮಾನ ಬೆಳೆಯುತ್ತದೆ ಎಂದು ಹೇಳಿದ್ದಾರೆ.
ನನ್ನನ್ನು ನೋಡಿದಾಗ ಕೆಲವರು ಸಿದ್ದರಾಮಯ್ಯಗೆ ದುರಹಂಕಾರ ಎನ್ನುತ್ತಾರೆ. ಆದರೆ ನಾನು ಸ್ವಾಭಿಮಾನಿಯೇ ಹೊರತು ದುರಹಂಕಾರಿ ಅಲ್ಲ. ನನ್ನನ್ನ ದುರಹಂಕಾರಿ ಅಂದರೆ ಕೇರ್ ಮಾಡುವುದಿಲ್ಲ ಎಂದು ನೇರ ಮಾತನಾಡಿದ್ದಾರೆ.