ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಮೂರು-ನಾಲ್ಕು ವರ್ಷಗಳಿಂದ ಪ್ರತಿ ಋತುವಿಗೂ ಮುನ್ನ ಎಂಎಸ್ ಧೋನಿ ಐಪಿಎಲ್‌ನಿಂದ ನಿವೃತ್ತಿ ಆಗೋ ಚರ್ಚೆ ಜೋರಾಗಿ ನಡೆಯುತ್ತಿದೆ. ಆದರೆ, ಅವರು ತಮ್ಮ ಫಿಟ್‌ನೆಸ್ ಮತ್ತು ಫಾರ್ಮ್ ಕಾಯ್ದುಕೊಂಡು ಪ್ರತಿ ವರ್ಷ ಐಪಿಎಲ್ ಅನ್ನು ಯಶಸ್ವಿಯಾಗಿ ಮುಗಿಸುತ್ತಿದ್ದಾರೆ.
ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೆ ಧೋನಿಯ ಪೋಷಕರಾದ ಪಾನ್ ಸಿಂಗ್ ಮತ್ತು ದೇವಕಿ ದೇವಿ ಆಗಮಿಸಿದ್ದು, ಐಪಿಎಲ್ ನಿವೃತ್ತಿ ಊಹಾಪೋಹಗಳಿಗೆ ಪುಷ್ಟಿ ನೀಡಿದಂತಾಗಿದೆ.
ಈ ಊಹಾಪೋಹಗಳಿಗೆ ಸ್ಪಷ್ಟ ಉತ್ತರ ನೀಡಿದ ಧೋನಿ, ನಾನು ಇನ್ನೂ ಐಪಿಎಲ್ ಆಡುತ್ತಿದ್ದೇನೆ. ನನಗೆ ಈಗ 43 ವರ್ಷ. ಮುಂದಿನ ವರ್ಷ ಜುಲೈ ವೇಳೆಗೆ 44 ತುಂಬುತ್ತವೆ. ಇನ್ನೊಂದು ಮ್ಯಾಚ್ ಆಡಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಲು 10 ತಿಂಗಳು ಸಮಯವಿದೆ, ಎಂದು ಹೇಳಿದ್ದಾರೆ.
ಆಡಬೇಕೆ ಅಥವಾ ಬೇಡವೇ ಎಂಬುದನ್ನು ನಾನು ನಿರ್ಧರಿಸುವುದಿಲ್ಲ. ಆಡಬಹುದೇ ಇಲ್ಲವೇ ಎಂಬುದನ್ನು ನನ್ನ ದೇಹವೇ ತೀರ್ಮಾನಿಸುತ್ತದೆ, ಎಂದು ಐಪಿಎಲ್ ನಿವೃತ್ತಿ ಊಹಾಪೋಹಗಳಿಗೆ ಧೋನಿ ಸ್ಪಷ್ಟನೆ ನೀಡಿದ್ದಾರೆ.