ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟಿ ನಯನತಾರಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸ್ಫೋಟಕ ಮಾತುಗಳನ್ನ ಆಡಿದ್ದಾರೆ. ನಿಮಗೆ ಇಂಡಸ್ಟ್ರಿಯಲ್ಲಿ ಕ್ಲೋಸ್ ಫ್ರೆಂಡ್ಸ್ ಯಾರಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ನಟಿ “ನನಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರೂ ಬೆಸ್ಟ್ ಫ್ರೆಂಡ್ ಅಂತಾ ಇಲ್ಲ” ಎಂದಿದ್ದಾರೆ.
ಒಂದು ಸಿನಿಮಾ ಮುಗಿದ ಬಳಿಕ ಮತ್ತೊಂದು ಸಿನಿಮಾ ಮಾಡಬೇಕಾದರೆ ಹೊಸ ಜನರ ಪರಿಚಯವಾಗುತ್ತೆ. ಆ ಸಿನಿಮಾ ಮುಗಿದ್ಮೇಲೆ ಮತ್ತೆ ಹೊಸ ಹೊಸ ಜನರ ಜೊತೆ ಕೆಲಸ ಮಾಡಬೇಕಾಗುತ್ತೆ. ಹೀಗಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ನನಗೆ ಬೆಸ್ಟ್ ಫ್ರೆಂಡ್ ಯಾರೂ ಇಲ್ಲ ಎಂದಿದ್ದಾರೆ.
ನಟಿ ನಯನತಾರಾ ಯಾವಾಗಲೂ ಸ್ಟ್ರೈಟ್‍ಫಾರ್ವರ್ಡ್ ಹೀಗಾಗಿ ಬೋಲ್ಡ್ ಆಗಿ ಆನ್ಸರ್ ಮಾಡಿದ್ದಾರೆ. ಇನ್ನು ರಾಕಿಂಗ್‍ಸ್ಟಾರ್ ಯಶ್ ನಟನೆಯ ಮಲ್ಟಿಸ್ಟಾರ್ ಸಿನಿಮಾ ಟಾಕ್ಸಿಕ್‍ನಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಚಿರಂಜೀವಿ ಅವರ 157ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.