ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 50ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕಕ್ಕೆ ಕುಟುಂಬಸ್ಥರೊಂದಿಗೆ ಶಿವಣ್ಣ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ನಂತರ ಮಾಧ್ಯಮವರ ಜೊತೆ ಮಾತನಾಡಿ, ನಾನು ಈಗಲೂ ಹೋಗಿ ಅಪ್ಪು ಸಿನಿಮಾ ನೋಡಿಲ್ಲ. ನನಗೆ ಅಪ್ಪು ಸಿನಿಮಾ ನೋಡೋದಕ್ಕೆ ಧೈರ್ಯವೇ ಇಲ್ಲ. ಇವತ್ತು ಪುನೀತ್ ಬದುಕಿದ್ದರೆ ಅವನ ಐವತ್ತನೇ ಹುಟ್ಟಿದಹಬ್ಬ. ನಾವೆಲ್ಲ ಸಂಭ್ರಮದಿಂದ ಆಚರಿಸುತ್ತಿದ್ದೆವು. ಅವನಿಲ್ಲ ಎಂದು ನೆನಪಿಸಿಕೊಳ್ಳೋದಕ್ಕೆ ನೋವಾಗುತ್ತದೆ.
ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪು ಉಳಿದಿದ್ದಾನೆ. ಅವನ ಕೆಲಸಗಳಿಂದ, ವ್ಯಕ್ತಿತ್ವದಿಂದ ಇನ್ನೂ ಅಜರಾಮರ ಆಗಿದ್ದಾನೆ. ಅಪ್ಪು ಇಲ್ಲೇ ನಮ್ಮ ಜೊತೆ ಎಲ್ಲೋ ಇದ್ದಾನೆ ಅನಿಸುತ್ತಿದೆ ಎಂದಿದ್ದಾರೆ.