ದಲಿತ ಸಿಎಂ ಆಗೋ ವಿಚಾರ ನನಗೆ ಗೊತ್ತಿಲ್ಲ, ಇದೆಲ್ಲ ಮಾಧ್ಯಮಗಳ ಸೃಷ್ಟಿ: ಸಚಿವ ಶರಣಪ್ರಕಾಶ ಪಾಟೀಲ

ದಿಗಂತ ವರದಿ ವಿಜಯಪುರ:

ದಲಿತ ಮುಖ್ಯಮಂತ್ರಿ ಆಗೋ ವಿಚಾರದ ಕುರಿತು ನನಗೆ ಗೊತ್ತಿಲ್ಲ, ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಹೇಳಿದರು.

ದಲಿತ ಸಿಎಂ ಕುರಿತು ಚರ್ಚೆ ವಿಚಾರ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ರೀತಿ ಯಾವುದೇ ಮಾಹಿತಿ ಇಲ್ಲಾ. ಆ ರೀತಿಯ ಚಲನ ವಲನ ನಮ್ಮ ಗಮನಕ್ಕೆ ಬಂದಿಲ್ಲಾ ಎಂದರು.

ಖರ್ಗೆ ಸಿಎಂ ಆಗೋ ಬಗ್ಗೆ ಚರ್ಚೆ ವದಂತಿ ಕುರಿತು, ಈ ಭೇಟಿ ಕುರಿತು ಈಗಾಗಲೇ ಸಿಎಂ ಸ್ಪಷ್ಟನೆ ನೀಡಿದ್ದಾರೆ. ದೆಹಲಿಗೆ ಹೋದ ಸಚಿವರು ಎಐಸಿಸಿ ಅಧ್ಯಕ್ಷರಿಗೆ ಭೇಟಿಯಾಗುತ್ತಾರೆ ಎಂದರು.

ದೆಹಲಿಗೆ ಹೋದ ಸಚಿವರು ಭೇಟಿಯಾಗೋದು ಸಹಜ, ಇದಕ್ಕೆ ವಿಶೇಷ ಅರ್ಥ ಕಲ್ಪಿಸೋ ಅಗತ್ಯವಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!