ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ನೆನ್ನೆ ಬೃಹತ್ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ಮಂಡನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಸಿಎಂ ಬಜೆಟ್ ಮಂಡನೆ ಮಾಡಿದ್ರೋ ಅಥವಾ ಬಿಜೆಪಿ ಬೈತಾ ನಿಂತಿದ್ರೋ ಒಂದೂ ಗೊತ್ತಾಗ್ತಿಲ್ಲ, ಬರೀ ಬಿಜೆಪಿ ಬೈಯೋದಕ್ಕೆ ಬಜೆಟ್ ಸಮಯ ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಕೂಡ ರಾಹುಲ್ ಗಾಂಧಿ ರೀತಿ ಮಾತನಾಡೋಕೆ ಶುರು ಮಾಡಿದ್ದಾರೆ. ಈ ಬಜೆಟ್ ಯಾರಿಗೂ ತೃಪ್ತಿ ತಂದಿಲ್ಲ. ಅಭಿವೃದ್ಧಿ ಪೂರಕವಂತೂ ಅಲ್ಲವೇ ಅಲ್ಲ, ಮೂಲಭೂತ ಸೌಕರ್ಯಗಳೆಲ್ಲ ನೆಲಕಚ್ಚುವ ಬಜೆಟ್ ಇದಾಗಿದೆ ಎಂದಿದ್ದಾರೆ.