March 23, 2026
Monday, March 23, 2026
spot_img

ಪ್ರೀತಿಗಾಗಿ ಏನೇನೆಲ್ಲಾ ಮಾಡ್ತಾರೋ ಗೊತ್ತಿಲ್ಲ, ಬಾಯ್‌ಫ್ರೆಂಡ್‌ ಸಾಲ ತೀರಿಸೋಕೆ ಕಳ್ಳಿಯಾದ ಪ್ರಿಯತಮೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಯ್‌ಫ್ರೆಂಡ್‌ ಸಾಲ ತೀರಿಸೋಕೆ ಪ್ರಿಯತಮೆ ಕಳ್ಳತನಕ್ಕೆ ಇಳಿದಿದ್ದಾರೆ.

ಹೌದು, ಬಾಯ್‌ ಫ್ರೆಂಡ್‌ ಸಾಲ ತೀರಿಸೋದಕ್ಕೆ 3.4 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣ ದೋಚಿರುವ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುಸಾಪಾಳ್ಯದಲ್ಲಿ ನಡೆದಿದೆ.

ಸಾಲ ಮಾಡಿಕೊಂಡಿದ್ದ ಸುಧಾಕರ್‌ಗೆ ಹಣ ನೀಡಲು ಆರೋಪಿ ಪ್ರಮೀಳಾ ಕಳ್ಳತನಕ್ಕೆ ಇಳಿದಿದ್ದಾಳೆ. ಕದ್ದ ಬಂಗಾರವನ್ನು ಹಣಕ್ಕೆ ಬದಲಾಯಿಸಿ ಹಣವನ್ನು ಪ್ರಿಯತಮನಿಗೆ ನೀಡಿದ್ದಾಳೆ.

ಆರೋಪಿತೆ ಪ್ರಮೀಳಾಗೆ ಮದುವೆಯಾಗಿ ಗಂಡ ಬಿಟ್ಟಿದ್ದು, ಪ್ರಿಯಕರನಿಗೆ ಮದುವೆಯಾಗಿ ಎರಡು ಮಕ್ಕಳಿದ್ದವು. ಬೊಮ್ಮನಹಳ್ಳಿಯ ಗಾರ್ಮೆಂಟ್ಸ್ನಲ್ಲಿ ಇಬ್ಬರು ಕೆಲಸ ಮಾಡುವಾಗ ಪರಿಚಯವಾಗಿ ಪ್ರೀತಿಯಾಗಿತ್ತು. ಬಳಿಕ ಅಲ್ಲಿ ಕೆಲಸ ಬಿಟ್ಟು ಖಾಸಗಿ ಅಪಾರ್ಟ್ಮೆಂಟ್‌ನಲ್ಲಿ ಮನೆಕೆಲಸ ಮಾಡುತ್ತಿದ್ದಳು. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಸುಧಾರಕ್ ಪ್ರಮೀಳಾಗೆ ಸಾಲ ತೀರಿಸೋಕೆ 20 ಸಾವಿರ ರೂ. ಕೇಳಿದ್ದ. ಆಗ ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿ, ಮಾರಾಟ ಮಾಡಿ ಪ್ರಿಯಕರನಿಗೆ ಹಣ ಕೊಟ್ಟಿದ್ದಳು.

ತಿಂಗಳ ನಂತರ ಮನೆಯಲ್ಲಿ ಕಳ್ಳತನದ ವಿಷಯ ಗೊತ್ತಾಗಿದೆ. ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಮಿಳಾರನ್ನು ವಿಚಾರಿಸಿದಾಗ ಸತ್ಯ ಬಾಯಿಬಿಟ್ಟಿದ್ದಾರೆ. ಸದ್ಯ ಸುಧಾಕರ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !