ನನ್ನ ಮಗ ಕ್ರಿಕೆಟಿಗನಾಗುವುದನ್ನು ಬಯಸುವುದಿಲ್ಲ: ಅಚ್ಚರಿಯ ಹೇಳಿಕೆ ನೀಡಿದ ಯುವರಾಜ್ ಸಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತಮ್ಮ ಮಗ ಕ್ರಿಕೆಟಿಗನಾಗಲು ಬಯಸುವುದಿಲ್ಲ ಎಂದು ಭಾರತದ ಮಾಜಿ ಆಲ್​ರೌಂಡರ್​ ಯುವರಾಜ್ ಸಿಂಗ್ (Yuvaraj SIngh) ಅವರು ಹೇಳಿಕೆ ನೀಡಿದ್ದಾರೆ.

ವಿಶ್ವ ಕ್ರಿಕೆಟ್​ನಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರೂ ಮತ್ತು ಭಾರತೀಯ ಕ್ರಿಕೆಟ್​ಗೆ ಅಪಾರ ಕೊಡುಗೆ ನೀಡಿದ್ದರೂ, ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವ ಅವರು ತಮ್ಮ ಮಗ ಓರಿಯನ್ ಕ್ರಿಕೆಟಿಗನಾಗುವುದನ್ನು ಬಯಸುವುದಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಚಾಟ್​ ಒಂದರಲ್ಲಿ ಮಾತನಾಡಿದ ಯುವರಾಜ್ ಸಿಂಗ್ “ನನ್ನ ಮಗ ಕ್ರಿಕೆಟಿಗನಾಗುವುದನ್ನು ನಾನು ಬಯಸುವುದಿಲ್ಲ. ಈ ದಿನಗಳಲ್ಲಿ ಮಕ್ಕಳು, ವಿಶೇಷವಾಗಿ ಕ್ರಿಕೆಟಿಗರ ಮಕ್ಕಳು ಹೊಂದಿರುವ ಮಾನಸಿಕ ಒತ್ತಡವು ತುಂಬಾ ಇದೆ ಎಂದು ನಾನು ಭಾವಿಸುತ್ತೇನೆ. ನಮ್ಮ ಸಾರ್ವಜನಿಕರು ಮತ್ತು ಮಾಧ್ಯಮಗಳು ಅವರನ್ನು (ಅವರ ಹೆತ್ತವರೊಂದಿಗೆ) ಹೋಲಿಸುತ್ತಲೇ ಇರುವುದರಿಂದ ಅವರಿಗೆ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ತಮ್ಮ ಮಗನಿಗೆ ಗಾಲ್ಫ್ ಇಷ್ಟವಿದೆ. ಆತ ಕೆಲವು ಶಾಟ್​ಗಳನ್ನು ಕಲಿತಿದ್ದಾನೆ. ಯಾವಾಗಲೂ ಕ್ರಿಕೆಟ್ ಬ್ಯಾಟ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಎಂದು ಬಹಿರಂಗಪಡಿಸಿದ್ದಾನೆ.

ನಾನು ಗಾಲ್ಫ್ ಆಡುವುದನ್ನು ಆನಂದಿಸುತ್ತೇನೆ. ಆದ್ದರಿಂದ ನಾನು ನನ್ನ ಮಗನಿಗಾಗಿ ಪ್ಲಾಸ್ಟಿಕ್ ಗಾಲ್ಫ್ ಸೆಟ್ ಖರೀದಿಸಿದ್ದೇನೆ. ಅವನು ಈಗ ಮತ್ತು ಅವನ ಕಲಿಕೆಯ ಹಂತದಲ್ಲಿರುವುದರಿಂದ ನಾನು ಅವನಿಗೆ ಕೆಲವು ಶಾಟ್​​ ಳನ್ನು ಕಲಿಸಿದೆ. ಮಗ ಕೆಲವು ಚೆಂಡುಗಳನ್ನು ಹೊಡೆದು ಬಳಿಕ ತಮ್ಮ ಎರಡೂ ಕೈಗಳಿಂದ ಚೆಂಡು ಎಸೆಯುತ್ತಿದ್ದ ಎಂದು ಅವರು ಹೇಳಿದರು.

ಒಂದು ದಿನ ನನ್ನ ಮಗ ನನ್ನ ಅತ್ತಿಗೆಯ ಮನೆಯಲ್ಲಿದ್ದ. ಅಲ್ಲಿ, ಆತ ಗಾಲ್ಫ್ ಸ್ಟಿಕ್ ತೆಗೆದುಕೊಳ್ಳಲಿಲ್ಲ. ಕ್ರಿಕೆಟ್ ಬ್ಯಾಟ್ ತೆಗೆದುಕೊಂಡು ಅಲ್ಲಲ್ಲಿ ಓಡಲು ಪ್ರಾರಂಭಿಸಿದ ಆದ್ದರಿಂದ, ಕೆಲವು ವಿಷಯಗಳು ನೈಸರ್ಗಿಕವಾಗಿಯೇ ಬರುತ್ತದೆ ಎಂದು ನಂಬಿದ್ದೇನೆ. ಅಂಥ ಸಂದರ್ಭದಲ್ಲಿ ನಿಜವಾಗಿಯೂ ಅವರಿಗೆ ಸಹಾಯ ಮಾಡಬೇಕಾಗುತ್ತದೆ. ಆತ ಕ್ರಿಕೆಟಿಗನಾಗಲು ಬಯಸಿದರೆ, ನಾನು ಖಂಡಿತವಾಗಿಯೂ ಅವರನ್ನು ಬೆಂಬಲಿಸುತ್ತೇನೆ ಎಂದು ಹೇಳಿದರು.

ಯುವರಾಜ್ ಸಿಂಗ್ ತಮ್ಮ 17 ವರ್ಷಗಳ ವೃತ್ತಿಜೀವನದಲ್ಲಿ ಟೀಮ್ ಇಂಡಿಯಾ ಪರ 40 ಟೆಸ್ಟ್, 304 ಏಕದಿನ ಮತ್ತು 58 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್​​ನಲ್ಲಿ 1900 ರನ್, ಏಕದಿನದಲ್ಲಿ 8701 ರನ್ ಮತ್ತು ಟಿ 20ಐನಲ್ಲಿ 1177 ರನ್ ಗಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!