ಮುಂದಿನ ಜನ್ಮದಲ್ಲಿಯೂ ನನಗೆ ಅಂತಹ ತಮ್ಮ ಬೇಡ: ಡಿ.ಕೆ ಶಿವಕುಮಾರ್ ಗೆ ಕುಮಾರಸ್ವಾಮಿ ತಿರುಗೇಟು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ ಜನ್ಮದಲ್ಲಿಯೂ ನನಗೆ ಡಿ.ಕೆ ಶಿವಕುಮಾರ್ ಅಂತಹ ತಮ್ಮ ಬೇಡ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy)ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿಕೆಶಿ, ಅಣ್ಣ ಹೇಳ್ತಿರಬೇಕು, ತಮ್ಮ ಕೇಳ್ತಿರಬೇಕು ಎಂದಿದ್ದರು.
ಈ ಕುರಿತು ಹೆಚ್‍ಡಿಕೆಯನ್ನು ಮಾಧ್ಯಮದವರು ಕೇಳಿದಾಗ, ಈ ಜನ್ಮದಲ್ಲಿಯಂತೂ ತಮ್ಮ ಆಗೋಕೆ ಸಾಧ್ಯವಿಲ್ಲ. ಮುಂದಿನ ಜನ್ಮದಲ್ಲೂ ಅಂತಹ ತಮ್ಮ ಬೇಡ ಎಂದು ಹೇಳಿದರು.

ಹೆಚ್‍ಡಿಕೆ-ಡಿಕೆಶಿ ಮಧ್ಯೆ `ಸಿಂಗಾಪುರ ಸ್ಕೆಚ್’ ಫೈಟ್ ಜೋರಾಗಿದೆ. ನಮಗಿಂತ ಜಾಸ್ತಿ ಅವರೇ ಶಾಸ್ತ್ರ ಕೇಳುತ್ತಾರೆ ಅಂದಿದ್ದ ಕುಮಾರಸ್ವಾಮಿಗೆ ಡಿಕೆಶಿ ಕೌಂಟರ್ ಕೊಟ್ಟಿದ್ದಾರೆ. ಪಾಪ ಮಾತಾಡಲಿ ಬಿಡಿ. ಅವರದ್ದೇ ಆದ ಅನುಭವ ಇದೆಯಲ್ವಾ. ಅಣ್ಣ ಹೇಳಿದ್ದಾರೆ, ತಮ್ಮ ಕೇಳುತ್ತಿರಬೇಕು ಅಂತ ಡಿಕೆಶಿ ವ್ಯಂಗ್ಯವಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!