ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡೋ-ಪಾಕ್ ಕ್ರಿಕೆಟ್ ಪಂದ್ಯ ವೇಳೆ ತಮ್ಮ ಚಿನ್ನದ ಮೊಬೈಲ್ (Gold Mobile)ಅನ್ನು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಕಳೆದುಕೊಂಡಿದ್ದರು. ಈ ವೇಳೆ ಯಾರಿಗಾದರೂ ಸಿಕ್ಕಿದ್ದರೆ ಹಿಂದುರಿಗಿಸುವಂತೆ ಕೇಳಿಕೊಂಡಿದ್ದರು.
ಇದೀಗ ಮೊಬೈಲ್ ಸಿಕ್ಕಿದೆ. ಆದರೆ, ಆ ಮೊಬೈಲ್ ಅನ್ನು ವಾಪಸ್ಸು ಪಡೆಯಲು ನನ್ನ ಬೇಡಿಕೆ ಈಡೇರಿಸಬೇಕೆಂದು ವ್ಯಕ್ತಿಯೋರ್ವ ಹೇಳಿದ್ದಾನೆ.
ಈ ಕುರಿತುಗ್ರೋವ್ ಟ್ರೇಡರ್ಸ್ ಹೆಸರಿನಲ್ಲಿ ಊರ್ವಶಿಗೆ ಇ-ಮೇಲ್ ಬಂದಿದ್ದು. ತಮ್ಮ ಮೊಬೈಲ್ ನನಗೆ ಸಿಕ್ಕಿದೆ. ಅದನ್ನು ನಿಮಗೆ ವಾಪಸ್ಸು ಮಾಡಲು ನನ್ನ ಬೇಡಿಕೆಯೊಂದಿಗೆ ಈಡೇರಿಸಬೇಕು. ನನ್ನ ಸಹೋದರ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸೆಗೆ ನೆರವಾಗಿ ಎಂದು ಕೇಳಿಕೊಂಡಿದ್ದಾರೆ. ಉರ್ವಶಿ ಕೂಡ ಅದಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಬಹುಮಾನ ಘೋಷಿಸಿದ್ದ ಊರ್ವಶಿ
ಊರ್ವಶಿ ರೌಟೇಲಾ (Urvashi Rautela) ಮೊನ್ನೆಯಷ್ಟೇ ತಮ್ಮ ದುಬಾರಿ ಮೊಬೈಲ್ ಕಳೆದುಕೊಂಡಿದ್ದರು. ನಿನ್ನೆವರೆಗೂ ಆ ಫೋನ್ (Mobile) ಪತ್ತೆಯಾಗಿರಲಿಲ್ಲ. ಅಲ್ಲದೇ, ಕೊನೆಯ ಬಾರಿಗೆ ಅದು ಯಾವ ಲೋಕೇಶನ್ ನಲ್ಲಿ ಇತ್ತು ಎನ್ನುವುದನ್ನು ಹೇಳಿಕೊಂಡಿದ್ದರು. ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದರಿಂದ ತನ್ನ ಮೊಬೈಲ್ ಸಿಕ್ಕವರು ಕೂಡಲೇ ನನ್ನನ್ನು ಸಂಪರ್ಕಿಸಿ ಎಂದು ಕೇಳಿಕೊಂಡಿದ್ದರು.
ಮೊಬೈಲ್ ತಂದುಕೊಟ್ಟವರಿಗೆ ಬಹುಮಾನ ನೀಡುವುದಾಗಿಯೂ ಅವರು ಹೇಳಿಕೊಂಡಿದ್ದರು. ಆ ಬಹುಮಾನ ಯಾವುದು ಎನ್ನುವುದನ್ನು ತಿಳಿಸಿರಲಿಲ್ಲ. ಮೊಬೈಲ್ ಕಳೆದುಕೊಂಡಿರುವ ಕುರಿತು ಪೊಲೀಸರು ಕೂಡ ಕಾಳಜಿ ವಹಿಸಿದ್ದು, ಊರ್ವಶಿ ಮೊಬೈಲ್ ಬೇಗ ಸಿಗಲಿ ಎಂದು ಹಾರೈಸಿದ್ದರು. ಹಾರೈಕೆ ಇದೀಗ ನಿಜವಾಗಿದೆ