Tuesday, January 27, 2026
Tuesday, January 27, 2026
spot_img

ನನ್ನ ದೇಹದಲ್ಲಿ ‘ಆನ್-ಆಫ್’ ಬಟನ್ ಇದೆ! ವೈರಲ್ ವಿಡಿಯೋ ಬಗ್ಗೆ ಅಸಲಿ ಸತ್ಯ ಬಿಚ್ಚಿಟ್ಟ ಹೃತಿಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ‘ಗ್ರೀಕ್ ಗಾಡ್’ ಎಂದೇ ಖ್ಯಾತರಾಗಿರುವ ಹೃತಿಕ್ ರೋಷನ್ ಅವರ ಇತ್ತೀಚಿನ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ನಟಿ ಸೋನಾಲಿ ಬೇಂದ್ರೆ ಅವರ ಪತಿ ಗೋಲ್ಡಿ ಬಹ್ಲ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದ ಹೃತಿಕ್, ಗೂನು ಬೆನ್ನಿನಂತೆ ಬಗ್ಗಿ ನಡೆಯುತ್ತಿರುವುದನ್ನು ಕಂಡು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಈ ಆತಂಕಕ್ಕೆ ಈಗ ಸ್ವತಃ ಹೃತಿಕ್ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ದೈಹಿಕ ಸ್ಥಿತಿಯ ಬಗ್ಗೆ ಸುದೀರ್ಘ ಪೋಸ್ಟ್ ಬರೆದಿರುವ ಹೃತಿಕ್, “ನನ್ನ ದೇಹವು ತುಂಬಾ ವಿಶಿಷ್ಟವಾಗಿದೆ. ದೇಹದ ಪ್ರತಿಯೊಂದು ಭಾಗಕ್ಕೂ ಆನ್ ಮತ್ತು ಆಫ್ ಬಟನ್ ಇರುವಂತಿದೆ. ಜನವರಿ 25ರಂದು ಇದ್ದಕ್ಕಿದ್ದಂತೆ ನನ್ನ ಎಡ ಮೊಣಕಾಲು ‘ಆಫ್’ ಆಗಿಬಿಟ್ಟಿತು, ಇದರಿಂದಾಗಿ ಇಡೀ ದಿನ ಕಿರಿಕಿರಿ ಅನುಭವಿಸಬೇಕಾಯಿತು,” ಎಂದು ನೋವನ್ನು ಹಂಚಿಕೊಂಡಿದ್ದಾರೆ.

View this post on Instagram

A post shared by Hrithik Roshan (@hrithikroshan)

ಹೃತಿಕ್ ರೋಷನ್ ಕೇವಲ ಮೊಣಕಾಲಿನ ಸಮಸ್ಯೆ ಮಾತ್ರವಲ್ಲದೆ, ಹುಟ್ಟಿನಿಂದಲೇ ಕೆಲವು ದೈಹಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವರ ಎಡಗಾಲು, ಎಡ ಭುಜ ಮತ್ತು ಬಲ ಮೊಣಕಾಲು ಕೂಡ ಇದೇ ರೀತಿ ಇದ್ದಕ್ಕಿದ್ದಂತೆ ಸ್ಪಂದಿಸುವುದನ್ನು ನಿಲ್ಲಿಸುತ್ತವೆಯಂತೆ. “ನನಗೆ ಒಂದು ವಿಶಿಷ್ಟವಾದ ಸಿನಾಪ್ಸ್ ವ್ಯವಸ್ಥೆ ಇದೆ. ಈ ಸಣ್ಣ ವೈಶಿಷ್ಟ್ಯವು ಸಾಮಾನ್ಯ ಜನರಿಗೆ ಸಿಗದ ವಿಭಿನ್ನ ಅನುಭವಗಳನ್ನು ನನಗೆ ನೀಡಿದೆ,” ಎಂದು ಅವರು ಬರೆದುಕೊಂಡಿದ್ದಾರೆ.

ತೆರೆಯ ಮೇಲೆ ಅತ್ಯಂತ ಚಟುವಟಿಕೆಯಿಂದ, ಅದ್ಭುತವಾಗಿ ಡ್ಯಾನ್ಸ್ ಮಾಡುವ ಹೃತಿಕ್ ಹಿನ್ನೆಲೆಯಲ್ಲಿ ಇಷ್ಟೊಂದು ದೈಹಿಕ ಸಮಸ್ಯೆಗಳಿವೆ ಎಂಬುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಆದರೂ ಇವೆಲ್ಲವನ್ನೂ ಮೀರಿ ಅವರು ತೋರುವ ಫಿಟ್ನೆಸ್ ಮತ್ತು ಶ್ರದ್ಧೆಗೆ ಈಗ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !