ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೊಂದು ಕಳಪೆ ಬಜೆಟ್, ನನ್ನ ಜೀವಮಾನದಲ್ಲೇ ಇಂಥ ಕಳಪೆ ಬಜೆಟ್ ನಾನೆಲ್ಲೂ ನೋಡಿಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಈಗಾಗಲೇ 14 ಬಜೆಟ್‌ಗಳನ್ನು ಮಂಡನೆ ಮಾಡಿದ್ದರು. ಇಂಥವರಿಂದ ಈ ರೀತಿ ಕೆಟ್ಟ ಬಜೆಟ್ ನಿರೀಕ್ಷೆ ಮಾಡಿರಲಿಲ್ಲ. ಕೇಂದ್ರ ಸರ್ಕಾರವನ್ನು ದೂರಲು ಅರ್ಧ ಬಜೆಟ್ ಮೀಸಲಿಟ್ಟಂತೆ ಕಾಣಿಸಿದೆ. ಅಂಕಿ ಅಂಶಗಳು ಸರಿಯಾಗಿಲ್ಲ. ಇನ್ನು ಡಿಕೆಶಿ ಅವರ ಜಲಸಂಪನ್ಮೂಲ ಖಾತೆಗೂ ಯಾವುದೇ ಅನುದಾನ ಇಲ್ಲ. ಎಷ್ಟು ಮುಖ್ಯ ವಿಷಯಗಳನ್ನು ಬಿಟ್ಟು ಬಜೆಟ್ ಮಂಡನೆ ಮಾಡಿದ್ದಾರೆ. ಜೊತೆಗೆ ಹಣಕಾಸು ಪರಿಸ್ಥಿತಿ ದಿವಾಳಿಯಾಗಿಸುವ ಬಜೆಟ್ ಇದು ಎಂದಿದ್ದಾರೆ.