ನನಗೆ ವಾಹನ ಖರೀದಿಸಿದ ಅನುಭವವಿಲ್ಲ, ಸೈಕಲ್ ಕೂಡ ಖರೀದಿಸಿಲ್ಲ: ಎಕ್ಸ್‌ಪೋದಲ್ಲಿ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಫೆಬ್ರವರಿ 2) ರಾಷ್ಟ್ರ ರಾಜಧಾನಿಯ ಭಾರತ್ ಮಂಟಪದಲ್ಲಿ ನಡೆದ ಭಾರತದ ಅತಿದೊಡ್ಡ ಮತ್ತು ಮೊದಲ ಮೊಬಿಲಿಟಿ ಪ್ರದರ್ಶನ-ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ 2024 ರಲ್ಲಿ ಭಾಗವಹಿಸಿದರು.

ಈ ವೇಳೆ ಮಾತನಾಡಿದ ಅವರು, ದೇಶದಲ್ಲಿ ಈ ರೀತಿಯ ಎಕ್ಸ್‌ಪೋಗಳು ಆಯೋಜನೆಗೊಳ್ಳುತ್ತಿರುವುದನ್ನು ನೋಡಲು ಆನಂದವಾಗುತ್ತಿದೆ. ನನಗೆ ವಾಹನ ಖರೀದಿಸಿದ ಯಾವುದೇ ಅನುಭವವಿಲ್ಲ. ಸೈಕಲ್ ಕೂಡ ಖರೀದಿಸಿಲ್ಲ ಎಂದು ಮೋದಿ ಹೇಳಿದ್ದಾರೆ.

ಮೋದಿ ಈಮಾತಿಗೆ ಆಟೋ ಎಕ್ಸ್‌ಪೋದಲ್ಲಿನ ಉದ್ಯಮಿಗಳು, ತಜ್ಞರು ಚಪ್ಪಾಳೆ ತಟ್ಟಿಸಿದ್ದಾರೆ. ಈ ವೇಳೆ ಒಂದು ಬಾರಿ ಆಟೋ ಎಕ್ಸ್‌ಪೋಗೆ ಭೇಟಿ ನೀಡುವಂತೆ ನಾನು ದೆಹಲಿ ಜನತೆಗೆ ಮನವಿ ಮಾಡುತ್ತೇನೆ ಎಂದು ಮೋದಿ ಹೇಳಿದ್ದಾರೆ.

ಭಾರತದ ಆಟೋ ಮೊಬಿಲಿಟಿ, ಸಪ್ಲೈ ಚೈನ್ ಸೇರಿದಂತೆ ಸಂಪೂರ್ಣ ಸಂಪರ್ಕಿತ ವ್ಯವಸ್ಥೆಯನ್ನು ಒಂದು ಮಂಟಪದೊಳಗೆ ತಂದು ಎಕ್ಸ್‌ಪೋ ಆಯೋಜಿಸಲಾಗಿದೆ. ಭಾರತ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಹಾಗೂ ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡಿದೆ. ಪ್ರಮುಖವಾಗಿ ಬ್ಯಾಟರಿ ಉತ್ಪಾದನೆ ಸರಿಯಾದ ಪ್ರಮಾಣದಲ್ಲಿ ನಾವು ಮಾಡಬೇಕಿದೆ. ಈ ಕುರಿತು ಇತ್ತೀಚೆಗೆ ಗ್ಲೋಬಲ್ ಸಮ್ಮಿಟ್‌ನಲ್ಲಿ ನಾನು ಪಾಲ್ಗೊಂಡಿದ್ದೆ. ಹಲವು ವಿಚಾರಗಳ ಕುರಿತು ಚರ್ಚೆ ನಡೆದಿತ್ತು. ಈ ವಿಚಾರಗಳನ್ನು ಮೂರನೇ ಅವಧಿ ಸರ್ಕಾರದಲ್ಲಿ ಜಾರಿಗೆ ತರಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

ಈ ವೇಳೆ ನಮ್ಮ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂಬುದು ಖಚಿತ. ಕಳೆದ 10 ವರ್ಷಗಳಲ್ಲಿ, ಸರ್ಕಾರದ ಪ್ರಯತ್ನಗಳಿಂದಾಗಿ ಸುಮಾರು 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಇಂದಿನ ಭಾರತವು 2047 ರ ವೇಳೆಗೆ ದೇಶವನ್ನು ‘ಅಭಿವೃದ್ಧಿ’ ಮಾಡುವ ಗುರಿಯೊಂದಿಗೆ ಮುಂದುವರಿಯುತ್ತಿದೆ. ಈ ಗುರಿಯನ್ನು ಸಾಧಿಸುವಲ್ಲಿ ಚಲನಶೀಲತೆ ವಲಯವು ದೊಡ್ಡ ಪಾತ್ರ ವಹಿಸುತ್ತದೆ” ಎಂದು ಮೋದಿ ಹೇಳಿದರು.

ಮೋದಿಯ 3ನೇ ಬಾರಿಗೆ ಸರ್ಕಾರ ರಚನೆ ಮಾತು ಹೇಳುತ್ತಿದ್ದಂತೆ ಇಡೀ ಸಭಾಂಗಣದಲ್ಲಿದ್ದ ಉದ್ಯಮಿಗಳು, ತಜ್ಞರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ.

ಇದು ಸರಿಯಾದ ಸಮಯ ಎಂದು ನಾನು ಯಾವಾಗಲೂ ಹೇಳಿದ್ದೇನೆ. ಈ ಮಂತ್ರವು ಚಲನಶೀಲತೆ ವಲಯಕ್ಕೆ ಚೆನ್ನಾಗಿ ಕುಳಿತುಕೊಳ್ಳುತ್ತದೆ. ಭಾರತವು ಚಂದ್ರನ ಮೇಲಿದೆ ಮತ್ತು ವೇಗವಾಗಿ ಚಲಿಸುತ್ತಿದೆ. ಚಲನಶೀಲತೆ ಕ್ಷೇತ್ರಕ್ಕೆ ಇದು ಸುವರ್ಣ ಯುಗದ ಆರಂಭವಾಗಿದೆ. ಇಂದು, ದೇಶದ ಆರ್ಥಿಕತೆಯು ವೇಗವಾಗಿ ವಿಸ್ತರಿಸುತ್ತಿದೆ ಎಂದು ಹೇಳಿದರು.

ದೇಶದಲ್ಲಿ ತನ್ನದೇ ಆದ ಆಕಾಂಕ್ಷೆಗಳು ಮತ್ತು ಭರವಸೆಗಳೊಂದಿಗೆ ಹೊಸ ಮಧ್ಯಮ ವರ್ಗ ಹೊರಹೊಮ್ಮಿದೆ. ಮಧ್ಯಮ ವರ್ಗದ ಆದಾಯ ಮತ್ತು ಮಿತಿಯನ್ನು ವಿಸ್ತರಿಸಲಾಗಿದೆ. ಈ ಅಂಶಗಳು ಚಲನಶೀಲತೆ ಕ್ಷೇತ್ರದಲ್ಲಿ ಹೊಸ ಎತ್ತರವನ್ನು ಖಚಿತಪಡಿಸುತ್ತವೆ. 2014ಕ್ಕೂ ಮೊದಲು ಭಾರತದಲ್ಲಿ 12 ಕೋಟಿ ಕಾರುಗಳು ಮಾರಾಟವಾಗಿದ್ದವು. 2014ರಿಂದೀಚೆಗೆ 21 ಕೋಟಿ ಕಾರುಗಳು ಮಾರಾಟವಾಗಿವೆ ಎಂದರು.

ಚಾಲಕರಿಗಾಗಿ ಹೊಸ ಯೋಜನೆ ರೂಪಿಸಿದ್ದೇವೆ. ಬಿಡುವಿಲ್ಲದೆ ಪ್ರಯಾಣ ಮಾಡುವ ವಾಹನ ಚಾಲಕರಿಗೆ ಹೆದ್ದಾರಿಗಳಲ್ಲಿ ವಿಶ್ರಾಂತಿ ಪಡೆಯಲು, ಸ್ನಾನ, ಆಹಾರ, ಕುಡಿಯ ನೀರು, ವಾಹನ ಪಾರ್ಕಿಂಗ್ ಮಾಡಲು ಭವನ ನಿರ್ಮಾಣ ಮಾಡಲಾಗುತ್ತದೆ. ಈ ಮೂಲಕ ವಾಹನ ಚಾಲಕರ ಸುರಕ್ಷತೆಯಿಂದ ಚಾಲನೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

ಇಂದು ಭಾರತದಲ್ಲಿ ರಬ್ಬರ್ ಕ್ಷೇತ್ರ ವಿಫುಲವಾಗಿದೆ. ನಾವು ಅತ್ಯುತ್ತಮ ಟೈಯರ್ ನಿರ್ಮಾಣ ಮಾಡುತ್ತಿದ್ದೇವೆ. ಆದರೆ ಜಾಗತಿಕ ಮಟ್ಟದಲ್ಲಿ ಭಾರತ ರಬ್ಬರ್ ಹಾಗೂ ಅದರ ಉತ್ಪನ್ನ ಕ್ಷೇತ್ರದಲ್ಲೂ ನಂಬರ್ 1 ಆಗಿ ಬೆಳೆಯಬೇಕು. ಇದಕ್ಕಾಗಿ ಉದ್ಯಮಿಗಳು, ರಬ್ಬರ್ ಉತ್ಪನ್ನಗಳ ಉದ್ಯಮಿಗಳು ರೈತರ ಜೊತೆ ಸೇರಿ ಮಾತುಕತೆ ನಡೆಸಿ ಅವರಿಂದ ನೇರವಾಗಿ ಉತ್ಪನ್ನ ಪಡೆದು ಉತ್ಪಾದನೆ ಮಾಡಲು ಪೂರಕ ವಾತವಾರಣ ಇದೀಗ ನಿರ್ಮಾಣವಾಗಿದೆ ಎಂದು ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!