March 15, 2026
Sunday, March 15, 2026
spot_img

‘ಮೋದಿ ರಾಜಕೀಯ ಜೀವನ ಹಾನಿಗೊಳಿಸುವ ಉದ್ದೇಶ ನನಗಿಲ್ಲ’: ಟ್ರಂಪ್ ಹೇಳಿಕೆಗೆ ವಿದೇಶಾಂಗ ಸಚಿವಾಲಯ ಫುಲ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಜೀವನದ ಕುರಿತು ನೀಡಿರುವ ಹೇಳಿಕೆ ಸದ್ಯ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆ, ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈಸ್ವಾಲ್, ವಿಡಿಯೋ ನಿಜವಾಗಿಯೂ ಇದ್ದರೆ ಅದರ ಸತ್ಯಾಸತ್ಯತೆ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ. ನಾನು ಆ ವೀಡಿಯೊವನ್ನು ನೋಡಿಲ್ಲ. ಆದರೆ ಅಂತಹ ವೀಡಿಯೊ ನಿಜವಾಗಿಯೂ ಇದ್ದರೆ, ಅದು ನಿಜವೋ ಅಥವಾ ಸುಳ್ಳೋ, ನಾವು ಅದರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಟ್ರಂಪ್ ಈ ವಿಡಿಯೋದಲ್ಲಿ ಮೋದಿ ಒಬ್ಬ ಮಹಾನ್ ವ್ಯಕ್ತಿ, ಅವರು ಟ್ರಂಪ್ ಅವರನ್ನು ಪ್ರೀತಿಸುತ್ತಾರೆ. ಈಗ, ಪ್ರೀತಿ ಎಂಬ ಪದವನ್ನು ನೀವು ಬೇರೆ ರೀತಿಯಲ್ಲಿ ತೆಗೆದುಕೊಳ್ಳಬೇಡಿ. ಅವರ ರಾಜಕೀಯ ವೃತ್ತಿಜೀವನವನ್ನು ನಾಶಮಾಡಲು ನಾನು ಬಯಸುವುದಿಲ್ಲ, ಆದರೆ ನೀವು ಅರ್ಥಮಾಡಿಕೊಳ್ಳಬೇಕು, ನಾನು ವರ್ಷಗಳಿಂದ ಭಾರತವನ್ನು ನೋಡುತ್ತಿದ್ದೇನೆ. ನನ್ನ ಸ್ನೇಹಿತ ಬಹಳ ಸಮಯದಿಂದ ಅಲ್ಲಿದ್ದಾರೆ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !