ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಸ್ತುವಾರಿ ಬದಲಾವಣೆ ಮಾಡಿ ಎಂದು ಕೇಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿಗೆ ನಿನ್ನೆ, ಮೊನ್ನೆ ಎಲ್ಲಾ ಭೇಟಿ ಕೊಟ್ಟು ಸಾಕಷ್ಟು ಕಾನೂನಿನ ಕ್ರಮ ಕೈಗೊಂಡಿದ್ದೇವೆ. ಅನೇಕ ಬದಲಾವಣೆ ಮಾಡಿದ್ದೇವೆ. ಕಾನೂನು ಕ್ರಮ ಚುರುಕಿಗೆ ಗೃಹ ಸಚಿವರು ಸೂಚಿಸಿದ್ದಾರೆ. ಉಸ್ತುವಾರಿ ಬದಲಾವಣೆ ಮಾಡಿ ಎಂದು ಹೇಳಿಲ್ಲ, ಅವೆಲ್ಲ ಸುಮ್ಮನೆ. ಯಾರೋ ಒಬ್ಬರು ಇಬ್ಬರು ಹೇಳಿಕೆ ಕೊಟ್ಟಿರಬಹುದು. ವಿನಾಕಾರಣ ರಾಜಕಾರಣ ಮಾಡಬಾರದು ಎಂದು