ನನ್ನನ್ನು ಒಂದು ದಿನವೂ ವಿಚಾರಣೆಗೆ ಕರೆಸಿಲ್ಲ, ಆದ್ರೂ 90% ರಷ್ಟು ತನಿಖೆ ಪೂರ್ಣ ಹೇಗೆ: ಡಿಕೆ ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಿಬಿಐ ನನ್ನನ್ನು ಒಂದು ದಿನವೂ ವಿಚಾರಣೆಗೆ ಕರೆಸಿಲ್ಲ. ಈಗ ಹೇಳ್ತಾರೆ 90% ರಷ್ಟು ತನಿಖೆ ಪೂರ್ಣ ಆಗಿದೆ ಎಂದು ಅದು ಹೇಗೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪ್ರಶ್ನೆ ಮಾಡಿದ್ದಾರೆ.

ಅದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ (CBI) ತನಿಖೆಗೆ ಹೈಕೋರ್ಟ್ ಅಸ್ತು ಅಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಪ್ರಕರಣದಲ್ಲಿ ಎಫ್‌ಐಆರ್ ಹಾಕಿರೋದು ಸರಿ ಇಲ್ಲ ಅಂತ ನ್ಯಾಯಾಲಯಕ್ಕೆ ಹೋಗಿದ್ದೆ. ಯಡಿಯೂರಪ್ಪ ಸರ್ಕಾರ ಇದ್ದಾಗ ಸಿಬಿಐಗೆ ತನಿಖೆಗೆ ಅವಕಾಶ ಕೊಟ್ಟಿದ್ರು. ಈಗ 90% ರಷ್ಟು ತನಿಖೆ ಪೂರ್ಣ ಆಗಿದೆ ಅಂತ ಹೇಳಿದ್ದಾರೆ. ನನ್ನ ಒಂದು ದಿನ ಸಹ ವಿಚಾರಣೆಗೆ ಕರೆಸಿಲ್ಲ ಎಂದು ತಿಳಿಸಿದರು.

ನನ್ನ ಕರೆದು ಆಸ್ತಿಯನ್ನು ಕೇಳಬೇಕು. ನನ್ನ ಆಸ್ತಿ ಯಾವುದು? ನನ್ನ ಹೆಂಡತಿಯ ಆಸ್ತಿ ಯಾವುದು ಅಂತ ಕೇಳಬೇಕು. ಅದು ಹೇಗೆ 90% ರಷ್ಟು ತನಿಖೆ ಪೂರ್ಣ ಮಾಡಿದ್ದಾರೋ ನನಗೆ ಅರ್ಥ ಆಗುತ್ತಿಲ್ಲ. ನ್ಯಾಯಾಲಯದ ಬಗ್ಗೆ ನನಗೆ ನಂಬಿಕೆ ಇದೆ. ಕಾನೂನು ಚೌಕಟ್ಟಿನಲ್ಲೇ ಉತ್ತರ ಕೊಡುತ್ತೇನೆ ಎಂದರು.

ಸುಪ್ರೀಂ ಕೋರ್ಟ್ ಗೆ ಹೋಗುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಈಗಷ್ಟೇ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. 3 ತಿಂಗಳ ಒಳಗಾಗಿ ತನಿಖೆ ಪೂರ್ಣ ಮಾಡಲು ಹೇಳಿದ್ದಾರೆ, ನೋಡೋಣ. ನನಗೆ ನೋಟಿಸ್ ಕೊಟ್ಟು ಕರೆದು ಉತ್ತರ ಕೇಳಿ ಏನೇನು ಮಾಡ್ತಾರೋ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here