ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿ ಟಿ ರವಿ ಅವರನ್ನು ಹೈಕೋರ್ಟ್ ಬಂಧನಮುಕ್ತ ಮಾಡುವಂತೆ ಆದೇಶಿಸಿದೆ. ಇದರ ಬೆನ್ನಲ್ಲೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸಿಟಿ ರವಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಕೋರ್ಟ್ ಅಲ್ಲ, ಏನು ಸೆಕ್ಷನ್ ಹಾಕಿದ್ದಾರೆ, ಸರ್ಕಾರ ಹಾಗೂ ಪೊಲೀಸರು ಏನ್ ಸೆಕ್ಷನ್ ಹಾಕಿದ್ದಾರೆ ಗೊತ್ತಿಲ್ಲ. ನನಗೆ ಯಾವುದೂ ಗೊತ್ತಿಲ್ಲ, ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಪೊಲೀಸರು ಉಂಟು, ಕಾನೂನು ಉಂಟು ಎಂದರು.
ಸಿಟಿ ರವಿ ಬಂಧನದ ಹಿಂದೆ ಡಿಕೆ ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಸಂಚು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮದು ಇದರಲ್ಲಿ ಯಾವುದೂ ಇನ್ವಾಲ್ಮೆಂಟ್ ಇಲ್ಲ. ರಾಜ್ಯದಲ್ಲಿ ಏನಾದರೂ ನಾವೇ, ಸಿಎಂ ಹಾಗೂ ನಾನೇ ಹೊಣೆ ಅಂತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಮೊದಲು ಈ ತಾಯಿಗೆ, ಹೆಣ್ಣಿಗೆ, ಮಕ್ಕಳಿಗೆ ಆಗಿರೋ ಅವಮಾನ. ಈ ಸಂಸ್ಕೃತಿಗೆ ಮೊದಲು ಅದಕ್ಕೆ ಮಾತಾಡೋಕೆ ಹೇಳಿ ಎಂದು ಬಿಜೆಪಿ ನಾಯಕರನ್ನು ಕುಟುಕಿದರು.