ಹೊಸದಿಗಂತ ಡಿಜಿಟಲ್ ಡೆಸ್ಕ್:
ಚನ್ನಪಟ್ಟಣದ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಇಂದು ಬೃಹತ್ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು, ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ದೇವೇಗೌಡರು ಹಾಗೂ ನನಗೆ ಅಮೃತ ಕೊಟ್ಟಿರುವವರು ನೀವು. ಎಲ್ಲಾ ತೀರ್ಮಾನವನ್ನು ನಿಮಗೆ ಬಿಡುತ್ತೇನೆ. ನಮ್ಮಿಂದ ಅನ್ಯಾಯ ಆಗಿದ್ದರೆ ಶಿಕ್ಷೆ ಕೊಡಿ ಎಲ್ಲಾ ನೀವೇ ತೀರ್ಮಾನಿಸಿ ಎಂದು ಭಾವುಕರಾದರು.
ನನ್ನ ಹಳೆ ಸ್ನೇಹಿತ ಯೋಗೇಶ್ವರ್ ತಬ್ಬಿಕೊಂಡು ಬೆನ್ನು ತಟ್ಟುತ್ತಾರೆ ಎಂದು ಚೆಲುವರಾಯಸ್ವಾಮಿ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು. ಅವರನ್ನ ನೋಡಿದರೆ ನಗು ಬರುತ್ತದೆ. ಇವರ ಆಟವನ್ನು ದೇವರು ನೋಡುತ್ತಿದ್ದಾನೆ. ಮುಸ್ಲಿಂ ಸಮುದಾಯದವರು ಬಂದು ಇವತ್ತು ಶಕ್ತಿ ನೀಡಿದ್ದಾರೆ. 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ನಿಖಿಲ್ ಗೆಲ್ಲುತ್ತಾರೆ. ಮಾಗಡಿಯ ಹಳೆ ಸ್ನೇಹಿತ ಇಲ್ಲಿ ಮನೆ ಮನೆಗೆ ಸುತ್ತುತ್ತಿದ್ದಾನೆ. ದುಡ್ಡು ಹಿಡಿದುಕೊಂಡು ರಾತ್ರಿಯ ವೇಳೆ ಮನೆ ಮನೆ ಸುತ್ತುತ್ತಿದ್ದಾನೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ವಿರುದ್ಧ ಎಸ್‌ಟಿ ಕುಮಾರಸ್ವಾಮಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ರಾಮನಗರ ಜಿಲ್ಲೆ ಮಾಡಿದ್ದು ಯಾರು? ಈಗ ಏನೋ ರಾಮನಗರವನ್ನು ಬೆಂಗಳೂರಿಗೆ ಸೇರಿಸುತ್ತಾರಂತೆ.ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನೀವೇ ಸ್ಪರ್ಧಿಸಿ ಎಂದಿದ್ದೆ. ಆದರೆ ಯೋಗೇಶ್ವರ್ ಕಾಂಗ್ರೆಸ್ ಸೇರಿಕೊಂಡಿದ್ದಾರೆ.ಚನ್ನಪಟ್ಟಣ ಜನತೆ ಮಡಿಲಿಗೆ ನಿಖಿಲ್ ಕುಮಾರಸ್ವಾಮಿ ಹಾಕಿದ್ದೇನೆ. ಬಡವರ ಪರವಾದ ಆಡಳಿತಕ್ಕೆ ನಿಖಿಲ್ ಗೆಲ್ಲಿಸಿ ನನ್ನನ್ನು ದೆಹಲಿಯಲ್ಲಿ ಗುರುತಿಸಬೇಕಾದರೆ ರಾಮನಗರ ಜನರು ಕಾರಣ ಎಂದರು.
ಸಿಪಿ ಯೋಗೇಶ್ವರ್ ಸ್ಪರ್ಧಿಸುವುದಕ್ಕೂ ಕೂಡ ನಾವು ಅನುಮತಿ ಕೊಟ್ಟಿದ್ದೆವು.ಆದರೆ ನಮಗೆ ಮತ್ತು ಬಿಜೆಪಿಗೂ ಟೋಪಿ ಹಾಕಿ ಕಾಂಗ್ರೆಸ್ ಸೇರಿದ್ದಾರೆ. ನನಗೆ ಆರೋಗ್ಯದ ಸಮಸ್ಯೆ ಇದ್ದರೂ ಕೆಲಸ ಮಾಡುತ್ತಿದ್ದೇನೆ.ಪ್ರಧಾನಿ ಮೋದಿ ಅವರು ಕೊಟ್ಟಿರುವ ಜವಾಬ್ದಾರಿ ಯನ್ನು ನಿಭಾಯಿಸುತ್ತಿದ್ದೇನೆ. ನಿಖಿಲ್ ಗು ನೀವು ಆಶೀರ್ವಾದ ಮಾಡುತ್ತೀರಿ ಅನ್ನುವ ನಂಬಿಕೆ ಇದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಚನ್ನಪಟ್ಟಣದ ಬಹಿರಂಗ ಸಮಾವೇಶದಲ್ಲಿ ತಿಳಿಸಿದರು.