ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜ್ಯದ ಉದ್ದ ಅಗಲಕ್ಕೆ ಮತ್ತೊಮ್ಮೆ ಪ್ರವಾಸ ನಡೆಸಿ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿರುವುದಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸಬೇಕಿದೆ. ಒಮ್ಮೆ ಸಂಸದನಾಗಿ ಮತ್ತು ನಾಲ್ಕು ಬಾರಿ ಸಿಎಂ ಆಗಿ ಏಳು ಬಾರಿ ಶಾಸಕನಾಗಿ ಕೆಲಸ ಮಾಡಲು ಜಿಲ್ಲೆಯ ಜನ ಅವಕಾಶ ಮಾಡಿಕೊಟ್ಟೀದ್ದೀರಿ. ನಾನು ಶಿಕಾರಿಪುರ ಮತ್ತು ಶಿವಮೊಗ್ಗದ ಜನರಿಗೆ ಚಿರಋಣಿ. ಜಿಲ್ಲೆಯ ಜನರ ಋಣ ತೀರಿಸಲು ಆಗುವುದಿಲ್ಲ ಎಂದರು.