March 22, 2026
Sunday, March 22, 2026
spot_img

ಒಬ್ಬರೇ ಶಾಸಕರಾಗಿ ಹೊರಾಡುವ ಶಕ್ತಿ ಇದೆ, ಬಿಜೆಪಿ ಪಕ್ಷ ಬಿಟ್ಟು ಬರಲ್ಲ: ದಿನಕರ ಶೆಟ್ಟಿ

ಹೊಸದಿಗಂತ ವರದಿ,ಕುಮಟಾ :

ಸಿ.ಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಂಕೋಲಾ ತಾಲೂಕಿನ ಮಂಜುಗುಣಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾದ ಘಟನೆಯೊಂದು ನಡೆದಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ್ದ ಕುಮಟಾ ಬಿಜೆಪಿ ಶಾಸಕ ದಿನಕರ ಶೆಟ್ಟಿಗೆ ಕಾಂಗ್ರೆಸ್‌ ಸೇರುವಂತೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಶಾಸಕರು ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಜಿಲ್ಲೆಗೆ ಬಂದಾಗ ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದರು. ಸಿಎಂ ಮತ್ತು ಡಿಸಿಎಂ ಇಬ್ಬರೂ ಇದ್ದಾಗ ಚರ್ಚೆ ಆಯ್ತು. ‘ಜಿಲ್ಲೆಯಲ್ಲಿ ಒಬ್ಬರೇ ಬಿಜೆಪಿ ಶಾಸಕ ಇದ್ದೀರಾ, ನೀವು ಕಾಂಗ್ರೆಸ್ ಪಕ್ಷಕ್ಕೆ ಬನ್ನಿ’ ಎಂದು ಹೇಳಿದರು. ಆದರೆ ನಾನು ಒಬ್ಬರೇ ಶಾಸಕರಾಗಿ ಹೊರಾಡುವ ಶಕ್ತಿ ಇದೆ, ಬಿಜೆಪಿ ಪಕ್ಷ ಬಿಟ್ಟು ಬರಲ್ಲ ಎಂದು ಸ್ಪಷ್ಟಪಡಿಸಿದೆ,” ಎಂದು ಹೇಳಿದರು. ನಂತರ ಅವರು, ಹಾಗಾದ್ರೆ ನೀವು ಕಾಂಗ್ರೆಸ್ ಗೆ ಬರಬೇಡಿ ಅಲ್ಲೇ ಇರಿ ಎಂದು ಹಾಸ್ಯಭರಿತವಾಗಿ ಹೇಳಿದ್ದರು ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !