ನನಗಿದೆ ಟ್ರೈಜಿಮಿನಲ್‌ ನರಶೂಲೆ ಕಾಯಿಲೆ: ಶಾಕಿಂಗ್ ವಿಚಾರ ಬಿಚ್ಚಿಟ್ಟ ಸಲ್ಮಾನ್​ ಖಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬಾಲಿವುಡ್​ ಸ್ಟಾರ್ ನಟ ಸಲ್ಮಾನ್ ಖಾನ್ ಶಾಕಿಂಗ್ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.

ಅದೇನೆಂದರೆ ಕಳೆದ ಕೆಲವು ವರ್ಷಗಳಿಂದ ಗಂಭೀರ ಕಾಯಿಲೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಟ್ರೈಜಿಮಿನಲ್‌ ನರಶೂಲೆ ಎಂಬ ಕಾಯಿಲೆ ನನಗಿದೆ ಎಂದು ಸಲ್ಮಾನ್ ಖಾನ್ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ʻದಿ ಗ್ರೇಟ್‌ ಇಂಡಿಯನ್‌ ಕಪಿಲ್‌ʼ ಶೋನಲ್ಲಿ ಮೊದಲು ಅತಿಥಿಯಾಗಿ ಭಾಗವಹಿಸಿದ ನಟ ಈ ವೇಳೆ ತಮ್ಮ ಮದುವೆ ಮತ್ತು ಆರೋಗ್ಯ ಸಮಸ್ಯೆಗಳ ಕುರಿತು ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಗಂಭೀರ ಕಾಯಿಲೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಟ್ರೈಜಿಮಿನಲ್‌ ನರಶೂಲೆ (Trigeminal Neuralgia) ಎಂಬ ಕಾಯಿಲೆ ಇದೆ. ಅದರ ಹೊರತಾಗಿಯೂ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಸಲ್ಮಾನ್‌ ಖಾನ್‌ ಹೇಳಿಕೊಂಡಿದ್ದಾರೆ. ಅಲ್ಲದೇ ನನಗೆ ಮೆದುಳಿನಲ್ಲಿ ರಕ್ತನಾಳ ಸಮಸ್ಯೆ ಇದೆ. ಅದಕ್ಕಾಗಿಯೂ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ಎವಿಎಮ್‌ ಸಮಸ್ಯೆ ಕೂಡ ಇದೆ. ನನ್ನ ಪಕ್ಕೆಲುಬುಗಳು ಮುರಿತವಾಗಿದೆ. ಆದರೂ ನಾನು ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.

ಟ್ರೈಜಿಮಿನಲ್ ನರಶೂಲೆಯನ್ನು “ಆತ್ಮಹತ್ಯೆ ಕಾಯಿಲೆ” ಎಂದು ಕರೆಯಲಾಗುತ್ತದೆ. ಈ ಅಸ್ವಸ್ಥತೆಯು ಟ್ರೈಜಿಮಿನಲ್ ನರದ ಮೇಲೆ ಪರಿಣಾಮ ಬೀರುತ್ತದೆ. ಇದು ಹಲ್ಲುಜ್ಜುವುದು ಅಥವಾ ಅಗಿಯುವಂತಹ ಸರಳ ದೈನಂದಿನ ಚಟುವಟಿಕೆಗಳಿಂದ ತೀವ್ರವಾದ ಮುಖದ ನೋವಿಗೆ ಕಾರಣವಾಗುತ್ತದೆ.

ಇತ್ತೀಚಿನ ಕಾರ್ಯಕ್ರಮದಲ್ಲಿ ಸಲ್ಮಾನ್ ಅವರು ಮೆದುಳಿನ ರಕ್ತನಾಳದ ಉರಿಯೂತ ಮತ್ತು ಅಪಧಮನಿಯ ವಿರೂಪ (AVM) ದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದರು. ಮೆದುಳಿನ ರಕ್ತನಾಳದ ಉರಿಯೂತವು ದುರ್ಬಲಗೊಂಡ ರಕ್ತನಾಳದಲ್ಲಿನ ಉಬ್ಬುವಿಕೆಯಾಗಿದ್ದು, ಅದು ಛಿದ್ರಗೊಂಡರೆ ಜೀವಕ್ಕೆ ಅಪಾಯಕಾರಿಯಾದ ರಕ್ತಸ್ರಾವದ ಪಾರ್ಶ್ವವಾಯುವಿಗೆ ಕಾರಣವಾಗಬಹುದು. AVM ಎಂಬುದು ರಕ್ತನಾಳಗಳ ಅಪರೂಪದ ಮತ್ತು ಅಸಹಜ ಗೋಜಲು ಆಗಿದ್ದು, ಇದು ಸಾಮಾನ್ಯ ರಕ್ತದ ಹರಿವಿಗೆ ಅಡ್ಡಿ ಉಂಟು ಮಾಡುತ್ತೆ. ಇದು ಗಂಭೀರ ನರವೈಜ್ಞಾನಿಕ ಸಮಸ್ಯೆಗಳಿಗೆ ಕಾರಣವಾಗಬಹುದು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!