ರಾಜನನ್ನು ರಾಜನ ಥರ ನೋಡೋಕೆ ಇಷ್ಟ: ದರ್ಶನ್‌ ನೋಡಿ ರಚಿತಾ ರಾಮ್ ರಿಯಾಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೈಲಿನಲ್ಲಿರುವ ದರ್ಶನ್‌ರನ್ನು ರಚಿತಾ ರಾಮ್ ಭೇಟಿಯಾಗಿದ್ದು, ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜನನ್ನು ರಾಜನ ಥರ ನೋಡೋಕೆ ಇಷ್ಟ ಎಂದು ಹೇಳಿದರು.

ದರ್ಶನ್ ಸರ್ ಆರೋಗ್ಯವಾಗಿದ್ದಾರೆ. ಜೈಲಿನಲ್ಲಿ ಅವರನ್ನು ಹಾಗೇ ನೋಡೋಕೆ ಕಷ್ಟ ಆಗುತ್ತಿದೆ. ಎಲ್ಲರೂ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರಿಗೆ ಹೇಳಿ ಬಿಟ್ಟು ಬಂದೆ ನಾವೆಲ್ಲರೂ ನಿಮ್ಮ ಬರುವಿಕೆಗಾಗಿ ಕಾಯ್ತಿದ್ದೇವೆ. ಪ್ಲೀಸ್ ಬೇಗ ಬನ್ನಿ ಅಂತ. ನನಗೆ ಕಾನೂನು ಮೇಲೆ ನಂಬಿಕೆ ಇದೆ. ದರ್ಶನ್ ಸರ್ ಆದಷ್ಟು ಬೇಗ ಹೊರಗೆ ಬರುತ್ತಾರೆ ಎಂದು ನಂಬಿಕೆ ಇದೆ ಎಂದು ಮಾತನಾಡಿದ್ದಾರೆ.

ರಾಜನನ್ನು ರಾಜನ ಥರನೇ ನನಗೆ ನೋಡೋಕೆ ಇಷ್ಟ. ಇವತ್ತು ಅವರನ್ನು ನೋಡಿ ನಿರಾಳವಾಯ್ತು ಎಂದು ನಟಿ ಭಾವುಕರಾಗಿದ್ದಾರೆ. ಅವರು ಅಲ್ಲಿ ಆರೋಗ್ಯವಾಗಿ ಆರಾಮ ಆಗಿ ಇದ್ದಾರೆ. ನಾನು ಅವರ ಬ್ಯಾನರ್‌ನಿಂದ ಪರಿಚಯ ಆದವಳು. ನನಗೆ ಇವತ್ತು ಏನೇ ಹೆಸರು ಇದ್ದರೂ ಅದು ಅವರಿಂದ ಸಿಕ್ಕಿದೆ. ಅವರು ಅವತ್ತು ಒಪ್ಪಿಕೊಂಡಿದಕ್ಕೆ ನಾನು ಬಿಂದ್ಯಾ ರಾಮ್‌ನಿಂದ ರಚಿತಾ ರಾಮ್ ಆಗಿ ಬೆಳೆದಿದ್ದು. ನಾನು ಯಾವಗೂ ಅವರ ಕುಟುಂಬಕ್ಕೆ ಆಭಾರಿಯಾಗಿರುತ್ತೇನೆ. ಅವರನ್ನು ನೋಡಿ ನಾನೇ ಕಣ್ಣೀರಿಟ್ಟೆ ಆದರೆ ಅವರೇ ನನಗೆ ಸಮಾಧಾನ ಮಾಡಿದರು. ಅವರು ಆದಷ್ಟು ಬೇಗ ಹೊರಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!