ಇನ್ನೂ ಟೇಕ್ ಆಫ್ ಆಗದ I. N. D. I. A. ಮೈತ್ರಿಕೂಟ: ನಿತೀಶ್‌ ಕುಮಾರ್‌ ಬೇಸರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

I. N. D. I. A. ಮೈತ್ರಿಕೂಟ ಕುರಿತು ಬಿಹಾರ್‌ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದು, ಮೈತ್ರಿಕೂಟ ಯಾವುದೇ ಪ್ರಗತಿ ಕಾಣುತ್ತಿಲ್ಲ. ಕಾಂಗ್ರೆಸ್‌ (Congress) ಪಂಚರಾಜ್ಯ ಚುನಾವಣೆ ಕಡೆಗೆ ಮಾತ್ರ ತನ್ನ ಗಮನ ಕೇಂದ್ರೀಕರಿಸಿದೆ ಎಂದು ಹೇಳಿದ್ದಾರೆ .

ಪಾಟ್ನಾದಲ್ಲಿ ನಡೆದ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಸಿಪಿಐ) ರ‍್ಯಾಲಿಯಲ್ಲಿ ಮಾತನಾಡಿದ ಅವರು, ನಾವು ಅವರೊಂದಿಗೆ (ಕಾಂಗ್ರೆಸ್) ಮಾತನಾಡುತ್ತಿದ್ದೇವೆ. ಇಂಡಿಯಾ ಒಕ್ಕೂಟವನ್ನು ಮುನ್ನಡೆಸುವಂತೆ‌ ಅವರನ್ನು ಪ್ರೇರೇಪಿಸುತ್ತಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂಡಿಯಾ ಒಕ್ಕೂಟದಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ. ಐದು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಹೆಚ್ಚು ಆಸಕ್ತಿ ತೋರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ಇಂಡಿಯಾ ಬಣದ ಭವಿಷ್ಯದ ಬಗ್ಗೆ ಊಹಾಪೋಹಗಳು ಉಲ್ಬಣಗೊಂಡಿದೆ.

ನಾವು ಕಾಂಗ್ರೆಸ್‌ಗೆ ಪ್ರಮುಖ ಪಾತ್ರವನ್ನು ನೀಡಲು ಒಪ್ಪಿಕೊಂಡಿದ್ದೇವೆ. ಆದರೆ ಅವರು ಪಂಚರಾಜ್ಯ ಚುನಾವಣೆಯ ನಂತರವೇ ಮುಂದಿನ ಸಭೆಯನ್ನು ಕರೆಯುತ್ತಾರೆ ಎಂದು ತಿಳಿಸಿದ್ದಾರೆ. ಯಿಂದ ಕೇರಳ ಸಿಎಂಗೆ ಬೆದರಿಕೆ ಕರೆ

ಇಂಡಿಯಾ ಮೈತ್ರಿಕೂಟ ಕೊನೆಯ ಸಭೆ ಮುಂಬೈನಲ್ಲಿ ಆ.31 ಹಾಗೂ ಸೆ.1 ರಂದು ನಡೆಯಿತು. ನಂತರ ಮುಂದಿನ ದಿನಾಂಕ ನಿಗದಿಪಡಿಸಲಾಗುವುದು ಎಂದು ಕಾಂಗ್ರೆಸ್‌ ಘೋಷಿಸಿತು. ಆದರೆ ಇದುವರೆಗೂ ಯಾವುದೇ ಸುದ್ದಿ ಹೊರಬಂದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!