ಯಾರೂ ನೋಡಿರದ ನಿಮ್ಮ ಹೋರಾಟವನ್ನು ನಾನು ನೆನಪಿಸಿಕೊಳ್ಳುತ್ತೇನೆ: ವಿರಾಟ್ ಗೆ ಭಾವನಾತ್ಮಕ ಪತ್ರ ಬರೆದ ಅನುಷ್ಕಾ ಶರ್ಮಾ

ಭಾರತದ ಮಾಜಿ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನಕ್ಕೆ ಇತಿಶ್ರೀ ಹಾಡಿದ್ದು, ಇದರ ಬೆನ್ನಲ್ಲೇ ಅವರ ಪತ್ನಿ ಅನುಷ್ಕಾ ಶರ್ಮಾ ಭಾವನಾತ್ಮಕ ಸಂದೇಶವೊಂದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಅವರೆಲ್ಲಾ ನಿನ್ನ ರೆಕಾರ್ಡ್ಸ್‌ ಹಾಗೂ ಮೈಲಿಗಲ್ಲುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ನೀವು ಎಂದಿಗೂ ತೋರಿಸದ ಕಣ್ಣೀರು, ಯಾರೂ ನೋಡದ ಹೋರಾಟ ಮತ್ತು ಈ ಆಟದ ಸ್ವರೂಪಕ್ಕೆ ನೀವು ನೀಡಿದ ಅಚಲ ಪ್ರೀತಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಜೊತೆಗೆ ‘ಪ್ರತಿ ಟೆಸ್ಟ್ ಸರಣಿಯ ನಂತರ, ನೀವು ಸ್ವಲ್ಪ ಬುದ್ಧಿವಂತರಾಗಿ, ಸ್ವಲ್ಪ ವಿನಮ್ರರಾಗಿ ಹಿಂತಿರುಗಿದ್ದೀರಿ ಮತ್ತು ನೀವು ಅದರ ಮೂಲಕ ವಿಕಸನಗೊಳ್ಳುವುದನ್ನು ನೋಡಲು ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಅನುಷ್ಕಾ ಶರ್ಮಾ ಬರೆದುಕೊಂಡಿದ್ದಾರೆ.

‘ನೀವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೆಸ್ಟ್‌ನಿಂದ ನಿವೃತ್ತರಾಗುತ್ತೀರಿ ಎಂದು ನಾನು ಯಾವಾಗಲೂ ಊಹಿಸಿದ್ದೆ. ಆದರೆ ನೀವು ಯಾವಾಗಲೂ ನಿಮ್ಮ ಹೃದಯದ ಮಾತನ್ನು ಅನುಸರಿಸಿದ್ದೀರಿ, ನೀವು ವಿದಾಯಕ್ಕೆ ಅರ್ಹರಿದ್ದೀರಿ. ನೀವು ಆಟವನ್ನೂ, ದೇಶವನ್ನೂ ಎಷ್ಟು ಪ್ರೀತಿಸುತ್ತೀರೀ ಎಂಬುದು ನನಗೆ ಬಹಳ ಚೆನ್ನಾಗಿ ಗೊತ್ತಿದೆ. ನಿನ್ನ ಈ ಸಂಯಮ, ಶ್ರಮ, ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮ ನನಗೆ ಸದಾ ಪ್ರೇರಣೆಯಾಗಿದೆ’ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!