ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರ ಆಟೋಗ್ರಾಫ್ ಬೇಕೆಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಪ್ರಧಾನಿಯವರ ಫ್ಯಾನ್ ಫಾಲೋಯಿಂಗ್ ಹಾಗೆಯೇ ಜನರೊಂದಿಗೆ ಅವರ ಒಡನಾಟವನ್ನು ಕಂಡ ಬಳಿಕ ಬಿಡೆನ್ ʻನಾನು ನಿಮ್ಮ ಆಟೋಗ್ರಾಫ್ ತೆಗೆದುಕೊಳ್ಳಬೇಕುʼ ಎಂಬ ಇಂಗಿತವನ್ನು ವ್ಯಕ್ತಪಡಿಸಿದರು.
ಅಧ್ಯಕ್ಷ ಬಿಡೆನ್ ಮತ್ತು ಪಿಎಂ ಅಲ್ಬನೀಸ್ ಇಬ್ಬರೂ ತಮ್ಮ ವಿಚಿತ್ರ ಸವಾಲುಗಳ ಬಗ್ಗೆ ಪ್ರಧಾನಿ ಮೋದಿ ಬಳಿ ಹಂಚಿಕೊಂಡರು.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 90,000 ಕ್ಕೂ ಹೆಚ್ಚು ಜನರು ವಿಜಯದ ಲ್ಯಾಪ್‌ನಲ್ಲಿ ಪ್ರಧಾನಿ ಮೋದಿಯನ್ನು ಹೇಗೆ ಸ್ವಾಗತಿಸಿದರು ಎಂಬುದನ್ನು ಪಿಎಂ ಅಲ್ಬನೀಸ್ ನೆನಪಿಸಿಕೊಂಡರು.
ಇದಕ್ಕೆ ಜೋ ಬಿಡೆನ್, “ನಾನು ನಿಮ್ಮ ಆಟೋಗ್ರಾಫ್ ತೆಗೆದುಕೊಳ್ಳಬೇಕು” ಎಂದು ಪ್ರಧಾನಿ ಮೋದಿಯವರಿಗೆ ಹೇಳಿದರು.
ಜಪಾನ್‌ನಲ್ಲಿ ನಡೆಯುತ್ತಿರುವ ಗ್ರೂಪ್ ಆಫ್ ಸೆವೆನ್ (ಜಿ7) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಜಪಾನ್‌ಗೆ ತೆರಳಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಜಪಾನ್ ಸಹವರ್ತಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಪೂರ್ವ ಏಷ್ಯಾ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ.
“2024ರಲ್ಲಿ ಭಾರತದಲ್ಲಿ ಕ್ವಾಡ್ ಶೃಂಗಸಭೆಯನ್ನು ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ” ಎಂದು ಹಿರೋಷಿಮಾದಲ್ಲಿ ಗ್ರೂಪ್ ಆಫ್ ಸೆವೆನ್ ಶೃಂಗಸಭೆ (ಜಿ -7)ಯಲ್ಲಿ ನಡೆದ ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು.