”ಸೌತ್ ಇಂಡಿಯಾ ನಟಿ ಅಲ್ಲ, ಪ್ಯಾನ್ ಇಂಡಿಯಾ ನಟಿಯಾಗೋಕೆ ಆಸೆ”

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ,ತೆಲುಗು,ತಮಿಳು ಹಾಗೂ ಹಿಂದಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಮಿಂಚುತಿದ್ದಾರೆ.
ತನ್ನನ್ನು ದಕ್ಷಿಣ ಭಾರತದ ನಟಿ ಎಂದು ಕರೆಯಬಾರದು ಪ್ಯಾನ್ ಇಂಡಿಯಾ ನಟಿ ಎಂದು ಕರೆಯಬೇಕು ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.
ಸೌತ್ ನಟಿ ಎಂದೇ ಈಗಲೂ ಎಲ್ಲರೂ ನನ್ನನ್ನು ಗುರುತಿಸುತ್ತಾರೆ. ಆದರೆ ನನಗೆ ಹಾಗೆ ಗುರುತಿಸಿಕೊಳ್ಳೋಕೆ ಇಷ್ಟ ಇಲ್ಲ. ಎಲ್ಲ ಭಾಷೆಯ ಸಿನಿಮಾಗಳಲ್ಲಿಯೂ ಕೆಲಸ ಮಾಡಬೇಕು, ವಿಭಿನ್ನವಾದ ಸಿನಿಮಾಗಳನ್ನು ಮಾಡಬೇಕು ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.
ಭಾಷೆ ನನಗೆ ಸಮಸ್ಯೆ ಆಗಿಯೇ ಇಲ್ಲ. ಎಲ್ಲಿ ಹೋಗುತ್ತೇನೋ ಅಲ್ಲಿನ ಭಾಷೆ ಕಲಿಯುತ್ತೇನೆ. ಆದರೆ ಡಬ್ಬಿಂಗ್ ಮಾಡುವಷ್ಟು ಲೀಲಾಜಾಲವಾಗಿ ಎಲ್ಲ ಭಾಷೆಗಳನ್ನು ನಾನು ಕಲಿಯಬೇಕು ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!