ನಾನು ನಕ್ಸಲ್ ಆಗಿದ್ದೆ, ಎಡಪಂಥೀಯ ಸಿದ್ಧಾಂತಗಳನ್ನು ನಂಬುತ್ತಿದ್ದೆ: ವಿವೇಕ್ ಅಗ್ನಿಹೋತ್ರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‘ದಿ ಕಾಶ್ಮೀರ್ ಫೈಲ್ಸ್’ (The Kashmir Files Movie)ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಜೀವನದಲ್ಲಿ ನಡೆದ ಘಟನೆಯ ಕುರಿತು ಹೇಳಿಕೊಂಡಿದ್ದಾರೆ.

ಅದೇನೆಂದರೆ ಅವರು ಈ ಮೊದಲು ಎಡಪಂಥೀಯರಾಗಿದ್ದರಂತೆ. ಆದರೆ, ಅವರು ನಂತರ ಬಲಪಂಥೀಯರ ಸಾಲಿಗೆ ಸೇರಿದರು.

‘ನನ್ನ ಡಿಎನ್​ಎ ತುಂಬಾನೇ ಭಿನ್ನವಾದುದು. ಯಾವುದೇ ಸಂಸ್ಥೆಗಳು ನನ್ನನ್ನು ರೂಪಿಸಲು ಸಾಧ್ಯವಿಲ್ಲ. ನಾನು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದೆ. ‘ಕುದುರೆ ಒಳಗೆ ಹೋದರೆ ಕುದುರೆ ಹೊರಬರುತ್ತದೆ. ಕತ್ತೆ ಒಳಗೆ ಹೋದರೆ ಕತ್ತೆ ಮಾತ್ರ ಬರಲು ಸಾಧ್ಯ’ ಎಂಬ ಸಾಲು ಅಲ್ಲಿನ ಗೇಟ್​ ಮೇಲೆ ಬರೆದಿತ್ತು. ಒಂದು ಸಂಸ್ಥೆ ವ್ಯಕ್ತಿಯನ್ನು ರೂಪಿಸಲು ಸಾಧ್ಯವಿಲ್ಲ. ಹಾಗಾಗುತ್ತಿದೆ ಎಂದರೆ ಅದು ಸಂಸ್ಥೆಯ ವೈಫಲ್ಯ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಫಸ್ಟ್​ಪೋಸ್ಟ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಜೆಎನ್​​ಯು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಬ್ರೇನ್​ವಾಶ್ ಮಾಡುತ್ತಾರೆ. ಇಲ್ಲಿ ಕೆಲ ವಿದ್ಯಾರ್ಥಿಗಳನ್ನು ಹೇಗೆ ರೂಪಿಸಲಾಗುತ್ತದೆ ಎಂದರೆ ಅವರು ಏನೇ ಹೇಳಿದರೂ ವಿರೋಧಿಸುತ್ತಾರೆ. ಕೆಲವೊಮ್ಮೆ ನೀವು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕಾಗುತ್ತದೆ. ಕೇವಲ ಟೀಕೆ ಮಾಡುತ್ತಿರುವುದರಿಂದ ಸಹಕಾರಿ ಆಗುವುದಿಲ್ಲ. ನಾನು ನಕ್ಸಲ್ ಆಗಿದ್ದೆ, ಎಡಪಂಥೀಯ ಸಿದ್ಧಾಂತಗಳನ್ನು ನಂಬುತ್ತಿದ್ದೆ. ಆದರೆ, ಕೇವಲ ಟೀಕೆ ಮಾಡುತ್ತಿರುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದು ಗೊತ್ತಾಯಿತು. ಒಂದೊಮ್ಮೆ ಹಾಗೆಯೇ ಇದ್ದರೆ ಸಮಾಜಕ್ಕೆ ನಿಮ್ಮ ಕೊಡುಗೆ ಏನೂ ಇರುವುದಿಲ್ಲ’ ಎಂದಿದ್ದಾರೆ.

ನಾನು ಸಾಕಷ್ಟು ಸಮಯವನ್ನು ಬಾಲಿವುಡ್ ಹಾಗೂ ಜೆಎನ್​ಯುನಲ್ಲಿ ಕಳೆದಿದ್ದೇನೆ. ಆದರೆ, ಇದಾವುದೂ ನನ್ನನ್ನು ರೂಪಿಸಿಲ್ಲ’ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!