ಹೊಸದಿಗಂತ ಡಿಜಿಟಲ್ ಡೆಸ್ಕ್ :
ಯಾವಾಗಲೂ ತಮ್ಮ ಉಡುಪಿನ ವಿಚಾರವಾಗಿಯೇ ಸುದ್ದಿಯಲ್ಲಿರುವ ಉರ್ಫಿ ಜಾವೇದ್ (Urfi Javed) , ತಮ್ಮ ಜೀವನದ ಕಹಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ತನ್ನ ತಂದೆಯಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳಕ್ಕೊಳಗಾಗಿ ಮನೆಯಿಂದ ಓಡಿಹೋಗಿರುವ ಕುರಿತು ನಟಿ ನೆನಪಿಸಿದ್ದಾರೆ.
ಹ್ಯೂಮನ್ಸ್ ಆಫ್ ಬಾಂಬೆಯಲ್ಲಿ ನೀಡಿದ ಸಂದರ್ಶನದಲ್ಲಿ ಉರ್ಫಿ ಜೀವನದಲ್ಲಿನ ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ʻಲಕ್ನೋದಲ್ಲಿ ಬೆಳೆದಿದ್ದು ನಾನು. ನಾನು ಯಾವಾಗಲಾದರೂ ಕ್ರಾಪ್ ಟಾಪ್‌ಗಳನ್ನು ಧರಿಸಿದ್ದರೆ ಅದರ ಮೇಲೆ ಜಾಕೆಟ್‌ಗಳನ್ನು ಹಾಕಿಕೊಳ್ಳುತ್ತಿದ್ದೆ. ಮನೆಯಲ್ಲಿ ಅಂತಹ ಬಟ್ಟೆಗಳನ್ನು ನನಗೆ ಧರಿಸಲು ಬಿಡದೇ ಇದ್ದಾಗ, ಕಾರಣವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ತನ್ನ ತಂದೆ ತನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಂದಿಸುತ್ತಿದ್ದರು. ನಾನು ಪ್ರಜ್ಞೆ ಕಳೆದುಕೊಳ್ಳುವವರೆಗೂ ನನ್ನನ್ನು ಹೊಡೆಯುತ್ತಿದ್ದರು. ನಾನು ಆತ್ಮಹತ್ಯೆಗೂ ಪ್ರಯತ್ನಿಸಿದೆ ಎಂದುಉರ್ಫಿ ಹೇಳಿಕೊಂಡಿದ್ದಾರೆ.
15 ವರ್ಷದವಳಿದ್ದಾಗ ಯಾರೋ ಪೋರ್ನ್ ಸೈಟ್‌ನಲ್ಲಿ ನನ್ನ ಚಿತ್ರವನ್ನು ಅಪ್‌ಲೋಡ್ ಮಾಡಿದ್ದರು. ಇದು ಸಾಮಾನ್ಯ ಚಿತ್ರವಾಗಿತ್ತು. ನಾನು ಅದನ್ನು ನನ್ನ ಫೇಸ್‌ಬುಕ್ ಪ್ರೊಫೈಲ್ ಫೋಟೊವಾಗಿ ಟ್ಯೂಬ್ ಟಾಪ್ ಧರಿಸಿ ಅಪ್‌ಲೋಡ್ ಮಾಡಿದ್ದೇನೆ. ಯಾರೋ ಅದನ್ನು ಡೌನ್‌ಲೋಡ್ ಮಾಡಿ ಪೋರ್ನ್ ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇದರಿಂದ ಎಲ್ಲರೂ ನನ್ನನ್ನು ತುಂಬಾ ದೂಷಿಸಲು ಪ್ರಾರಂಭಿಸಿದರು. ನಾನು ಪೋರ್ನ್ ಸ್ಟಾರ್ ಎಂದು ಕರೆಯಲು ಶುರು ಮಾಡಿದರು.
ನನ್ನ ತಂದೆ ಕೂಡ ‘ಅವಳು ಪೋರ್ನ್ ಸ್ಟಾರ್’ ಅಂತಿದ್ದರು. ಯಾಕಂದರೆ ನನ್ನ ತಂದೆ ಇದೆಲ್ಲದರಿಂದ ಲಾಭ ಪಡೆದುಕೊಳ್ಳಲುಹೇಳುತ್ತಿದ್ದರು. ಪೋರ್ನ್ ಸೈಟ್ ನವರು 50 ಲಕ್ಷ ರೂ. ಕೇಳುತ್ತಿದ್ದಾರೆ ಎಂದು ಎಲ್ಲರಿಗೂ ಹೇಳುತ್ತಿದ್ದರು. ಮನೆಯಲ್ಲಿ ಅವರು ನನ್ನನ್ನು ಹೊಡೆಯುತ್ತಿದ್ದರಿಂದ ನಾನು ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಇಲ್ಲಿ ನಾನೇ ಬಲಿಪಶು, ಯಾಕೆ ಹೊಡೆಯುತ್ತಿದ್ದೀಯಾ?’ ಎನ್ನುವಷ್ಟು ಗೊಂದಲದಲ್ಲಿದ್ದೆ. ಎರಡು ವರ್ಷಗಳ ಕಾಲ ಅದನ್ನು ಸಹಿಸಿಕೊಂಡೆ. ಸಂಬಂಧಿಕರಿಂದ, ನನ್ನ ಸ್ವಂತ ತಂದೆಯಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡಿ ಹೋದೆ. ಆಗ ನನಗೆ 17 ವರ್ಷ ಎಂದು ಉರ್ಫಿ ಜೀವನದ ಕಹಿ ಘಟನೆಯನ್ನು ಹೇಳಿಕೊಂಡಿದ್ದಾರೆ.