ನಾನು ಕ್ಲಾಸ್​ನಲ್ಲಿ ನಿದ್ದೆ ಮಾಡ್ತಿದ್ದೆ, ಮೆಟ್ರೋದಲ್ಲಿ ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮೋದಿ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಮೆಟ್ರೋ ಹಳದಿ ಮಾರ್ಗದ ಮೊದಲ ರೈಲು ಇಂದು ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗಿನ ರೈಲಿಗೆ ಪ್ರಧಾನ ಮಂತ್ರಿ ಮೋದಿ ಚಾಲನೆ ನೀಡಿದರು. ನಂತರ ಶಾಲಾ ಮಕ್ಕಳು ಹಾಗೂ ಕಾರ್ಮಿಕರ ಜೊತೆಗೆ ರಾಗಿಗುಡ್ಡದಿಂದ ಎಲೆಕ್ಟ್ರಾನಿಕ್‌ ಸಿಟಿಯವರೆಗೆ ಸಂಚರಿಸಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಸೇರಿದಂತೆ ಸಂಸದರು ಸಾಥ್ ಕೊಟ್ಟಿದ್ದಾರೆ.

ಸರಕಾರಿ ಪ್ರೌಢಶಾಲೆಯ 16 ವಿದ್ಯಾರ್ಥಿಗಳು ಹಾಗೂ 8 ಮಂದಿ ಮೆಟ್ರೋ ಕಾರ್ಮಿಕರು ಹಾಗೂ ಸಾಮಾನ್ಯ ಜನ ಮೊದಲ ಕೋಚ್‌ನಲ್ಲಿ ಪ್ರಧಾನಿ ಪ್ರಯಾಣಿಸಿದ್ದಾರೆ. ಹಳದಿ ಮಾರ್ಗದ ಉದ್ಘಾಟನೆ ಬಳಿಕ ಮೆಟ್ರೋ ರೈಲಿನಲ್ಲಿ ಸಂಚರಿಸುವಾಗ, ಶಾಲಾ ಮಕ್ಕಳ ಜೊತೆ ಸಂವಾದ ನಡೆಸಿದರು. ನಿಂತುಕೊಂಡೆ ಪ್ರಯಾಣಿಸಿದ ಪ್ರಧಾನಿಗೆ ಸಿಎಂ, ಡಿಸಿಎಂ ಕೂಡಾ ಸಾಥ್ ಕೊಟ್ಟರು.

ಇನ್ನೂ ನಮ್ಮ ಮೆಟ್ರೋದಲ್ಲಿ ಪ್ರಧಾನಿ ಮೋದಿ ವಿದ್ಯಾರ್ಥಿಗಳ ಜೊತೆಗೆ ಸ್ವಾರಸ್ಯಕರ ಮಾತನಾಡಿದ್ದು, ಕರೆಕ್ಟ್ ಟೈಂಗೆ ನಿದ್ದೆ ಮಾಡಿ ಅಂತ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಇಷ್ಟದ ಹಾಗೂ ಬೋರಿಂಗ್ ಸಬ್ಜೆಕ್ಟ್ ಬಗ್ಗೆ ಕೂಡ ಮಾತುಕತೆ ನಡೆಸಿದ್ದಾರೆ.

ಮತ್ತೊಬ್ಬ ವಿದ್ಯಾರ್ಥಿನಿಗೆ ನೀನು ಯಾಕೆ ಊಟ ಮಾಡಲ್ವಾ ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸಿ ಎಂದು ಸಲಹೆ ನೀಡಿದರು.

ಇದೇ ವೇಳೆ ವಿದ್ಯಾರ್ಥಿಗಳ ಮುಂದೆ ನಾನು ಜಿಯೋಗ್ರಾಫಿ ಓದುವುದರಲ್ಲಿ ಡಲ್ ಇದ್ದೇ. ಜಿಯೋಗ್ರಾಫಿ ಕ್ಲಾಸ್ ತುಂಬಾ ಬೋರ್ ಆಗುತ್ತಿತ್ತು. ಜಿಯೋಗ್ರಾಫಿ ಕ್ಲಾಸ್​ ನಲ್ಲಿ ನಿದ್ದೆ ಮಾಡಿದ್ದೆ ಎಂಬ ತಮ್ಮ ಬಾಲ್ಯದ ಬಗ್ಗೆ ವಿದ್ಯಾರ್ಥಿಗಳ ಮುಂದೆ ಬಿಚ್ಚಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!