ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಿಂದು ಮತ್ತು ಇಸ್ಲಾಂ ಧರ್ಮದಲ್ಲಿ ಇರುವ ಮೂಲಭೂತವಾದಿಗಳು ತಮ್ಮನ್ನು ವಿರೋಧಿಸುತ್ತಾರೆ ಎಂದು ಬಾಲಿವುಡ್ ಸಾಹಿತಿ, ಚಿತ್ರಕಥೆಗಾರ ಜಾವೇದ್ ಅಖ್ತರ್ ಅವರು ಹೇಳಿದ್ದಾರೆ.
ಎರಡೂ ಧರ್ಮದ ಜನರು ನನ್ನನ್ನು ನಿಂದಿಸುತ್ತಾರೆ. ಕೇವಲ ಒಂದು ಕಡೆಯವರು ಅಲ್ಲ. ಆದರೆ ನನ್ನನ್ನು ಹೊಗಳುವವರು ಕೂಡ ಇದ್ದಾರೆ ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು. ಹಲವರು ನನ್ನನ್ನು ಬೆಂಬಲಿಸುತ್ತಾರೆ, ಪ್ರೋತ್ಸಾಹಿಸುತ್ತಾರೆ. ಎರಡೂ ಧರ್ಮದಲ್ಲಿ ಅತಿರೇಖವಾಗಿ ವರ್ತಿಸುವ ಜನರು ನನ್ನನ್ನು ನಿಂದಿಸುತ್ತಾರೆ ಎಂಬುದು ಕೂಡ ನಿಜ. ಅದೇ ವಾಸ್ತವ’ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.
ಒಂದು ಸಮುದಾಯದವರು ನನ್ನನ್ನು ಕಾಫೀರ್ ಎನ್ನುತ್ತಾರೆ, ನರಕಕ್ಕೆ ಹೋಗು ಎನ್ನುತ್ತಾರೆ. ಇನ್ನೊಂದು ಸಮುದಾಯದವರು ನನ್ನನ್ನು ಜಿಹಾದಿ ಎನ್ನುತ್ತಾರೆ, ಪಾಕಿಸ್ತಾನಕ್ಕೆ ಹೋಗು ಎನ್ನುತ್ತಾರೆ. ನನಗೆ ಇರುವ ಆಯ್ಕೆ ಪಾಕಿಸ್ತಾನ ಮತ್ತು ನರಕ ಮಾತ್ರ ಎಂಬುದಾದರೆ ನಾನು ಪಾಕಿಸ್ತಾನದ ಬದಲು ನರಕವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.