ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್‌ನಲ್ಲಿ ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ಇಲ್ಲಸಲ್ಲದ ಮಾತು ಹೇಳಿ ವಿಜಯೇಂದ್ರ ಮರ್ಯಾದೆ ಕಳೆದುಕೊಳ್ಳೋದು ಬೇಡ. ಮಣಿಕಂಠ ರಾಥೋಡ್ ವಿಚಾರದಲ್ಲಿ ಇದೇ ಬಿಜೆಪಿ ಅವರು ಕಲಬುರ್ಗಿಗೆ ಬಂದು ನನ್ನ ರಾಜೀನಾಮೆ ಕೇಳಿದ್ರು. ಆಮೇಲೆ ಏನ್ ಆಯ್ತು. ಅ ಬಗ್ಗೆ ವಿಜಯೇಂದ್ರ ಮಾತಾಡಿದ್ರಾ? ನಾವೇನು ಓಡಿ ಹೋಗ್ತಿಲ್ಲ ತನಿಖೆ ಆಗಲಿ FSL ವರದಿ ಬರಲಿ ಎಂದು ಕಿಡಿಕಾರಿದ್ದಾರೆ.