ಶೂ ಕಳುಹಿಸುತ್ತೇನೆ ಪಾದಯಾತ್ರೆಗೆ ಬನ್ನಿ: ತೆಲಂಗಾಣ ಸಿಎಂ ಕೆಎಸ್​​ಆರ್​​ಗೆ ಶರ್ಮಿಳಾ ಆಹ್ವಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣ ರಾಜಕೀಯ ಕದನ ರಂಗೇರಿದೆ. ನಮ್ಮ ಪಾದಯಾತ್ರೆಗೆ ಬನ್ನಿ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ವೈಎಸ್‌ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಆಹ್ವಾನ ನೀಡಿದ್ದಾರೆ.

ಜೊತೆಗೆ ಹೊಸ ಶೂಗಳನ್ನು ತೋರಿಸುವ ಮೂಲಕ ಪಾದಯಾತ್ರೆಗೆ ಬನ್ನಿ ಎಂದು ಹೇಳಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಶರ್ಮಿಳಾ, ತೆಲಂಗಾಣದಲ್ಲಿ ಎಷ್ಟು ಸಮಸ್ಯೆ ಇಲ್ಲ ಹೇಳಿ. ಸಮಸ್ಯೆಗಳೇ ಇಲ್ಲ ಎಂದಾದರೆ ನಾನು ರಾಜಿನಾಮೆ ಕೊಡ್ತೀನಿ. ಸಮಸ್ಯೆಗಳು ಇವೆ ಎಂದು ಗೊತ್ತಾದರೆ ಕೆಸಿಆರ್ ರಾಜಿನಾಮೆ ಕೊಡಲಿ ಎಂದು ಸವಾಲೆಸೆದರು.

ಕಳೆದ ಒಂಬತ್ತು ವರ್ಷಗಳಿಂದ ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿ ಈ ನಿರಂಕುಶ ಮತ್ತು ಅಸಮರ್ಥ ಆಡಳಿತದಿಂದ ಯಾವುದೇ ವಿಭಾಗವಿಲ್ಲ. ರೈತರ ಸಂಕಟದಿಂದ ಹಿಡಿದು ಯುವಕರ ಸಂಕಷ್ಟ, ಮಹಿಳೆಯರ ಸಮಸ್ಯೆಗಳು ಶಿಕ್ಷಣದವರೆಗೆ ಕೆಸಿಆರ್ ಅವರು ನೀಡಿದ ಪ್ರತಿ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಶರ್ಮಿಳಾ ಹೇಳಿದ್ದಾರೆ.

ತಾನು ಕೆಸಿಆರ್ ಅವರ ವೈಫಲ್ಯಗಳು ಮತ್ತು ಭ್ರಷ್ಟಾಚಾರವನ್ನು ಬಹಿರಂಗಪಡಿಸಲು ಪ್ರಯತ್ನಿಸಿದ್ದೆ. ಆಗ ನಮ್ಮ ಪಾದಯಾತ್ರೆಯ ಮೇಲೆ ದಾಳಿ ಮಾಡಲಾಯಿತು ಎಂದು ಶರ್ಮಿಳಾ ಆಕ್ರೋಶ ವ್ಯಕ್ತಪಡಿಸಿದರು.

ಇದೀಗ ರಾಜ್ಯ ಸರ್ಕಾರ ಪಾದಯಾತ್ರೆಗೆ ತಡೆಯೊಡ್ಡಿ ಎರಡು ತಿಂಗಳ ವಿರಾಮದ ನಂತರ, ಶರ್ಮಿಳಾ ತಮ್ಮ ಪಾದಯಾತ್ರೆಯನ್ನು ವಾರಂಗಲ್ ಜಿಲ್ಲೆಯಲ್ಲಿ ಪುನರಾರಂಭಿಸಲು ಸಿದ್ಧರಾಗಿದ್ದಾರೆ. ಕೆಸಿಆರ್ ಗೆ ಶೂ ಕಳುಹಿಸುತ್ತೇವೆ ಪಾದಯಾತ್ರೆಗೆ ಬನ್ನಿ ಎಂದು ಕರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here