ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಹಿನ್ನೆಲೆ ‘ಅಪ್ಪು’ ಸಿನಿಮಾ ರೀ-ರಿಲೀಸ್ ಆಗಿದೆ. ಇಂದು ಚಿತ್ರಮಂದಿರಕ್ಕೆ ಆಗಮಿಸಿ ರಾಘವೇಂದ್ರ ರಾಜ್‌ಕುಮಾರ್ ಕುಟುಂಬ ಸಿನಿಮಾ ವೀಕ್ಷಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಸಿನಿಮಾ ನೋಡಿ ಅಪ್ಪು ವಾಪಸ್ ಬಂದು ಬಿಡುತ್ತಾನೋ ಅನಿಸ್ತು ಎಂದು ಸಹೋದರನನ್ನು ನೆನೆದು ಭಾವುಕರಾಗಿದ್ದಾರೆ.
ಅಭಿಮಾನಿಗಳ ಜಾತ್ರೆ ನೋಡಿದ್ರೆ ಒಂದು ಕಡೆ ನೋವಾಗುತ್ತದೆ, ಇನ್ನೊಂದು ಕಡೆ ಖುಷಿಯಾಗುತ್ತದೆ. ‘ಅಪ್ಪು’ ಸಿನಿಮಾ ರಿಲೀಸ್ ಆದ ಆ ದಿನಕ್ಕೆ ನಾವು ಹೋಗಬಾರದು. ಆಗ ಅಪ್ಪಾಜಿ, ಅಮ್ಮ, ಅಪ್ಪು ಇದ್ದರು. ಆ ದಿನಗಳು ನೆನಪಾಗುತ್ತದೆ. ಹೀಗಿರುವಾಗ ಈಗ ಸಿನಿಮಾ ರಿಲೀಸ್ ಆಗಿ 23 ವರ್ಷ ಆದ್ರೂ ‘ಅಪ್ಪು’ ಸಿನಿಮಾದ ಡೈಲಾಗ್, ಲಿರಿಕ್ಸ್ ಅನ್ನು ಅಭಿಮಾನಿಗಳು ಮರೆತಿಲ್ಲ. ಎಲ್ಲರೂ ಅಪ್ಪುನ ಸಂಭ್ರಮಿಸಿದರು ಎಂದಿದ್ದಾರೆ.
ಪಿಕ್ಚರ್ ನೋಡಿದಾಗ ಅಪ್ಪು ಬಂದು ಬಿಡುತ್ತಾನೆ ಅನಿಸುತ್ತಿತ್ತು. ಈ ಸಿನಿಮಾದಿಂದ ನೀವೆಲ್ಲಾ ಅವರಿಗೆ ಪವರ್ ಸ್ಟಾರ್ ಅಂತ ಬಿರುದು ನೀಡಿದ್ರಿ. ಅದನ್ನು ನಾವು ಯಾವತ್ತೂ ಮರೆಯೋದಿಲ್ಲ. ನಿಮ್ಮ ಅಪ್ಪು ಸಿನಿಮಾ ಮೂಲಕ ನಮ್ಮ ಜೊತೆಯಿದ್ದಾರೆ. ಹೀಗೆ ಅವರ ಸಿನಿಮಾ ರಿಲೀಸ್ ಮಾಡಿ ನೋಡ್ತಾ ಇರೋಣ ಎಂದು ರಾಘಣ್ಣ ಮಾತನಾಡಿದ್ದಾರೆ.