ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಐಎಸ್‌ಐ ನಿಂದ ಹನಿಟ್ರಾಪ್ ಗೆ ಒಳಗಾಗಿದ್ದ ವಾಯುಸೇನೆತ ಯೋಧನೊಬ್ಬನನ್ನು ದೆಹಲಿ ಪೋಲೀಸರು ಬಂಧಿಸಿದ್ದಾರೆ. ಈತನ ಮೂಲಕ ಪಾಕಿಸ್ಥಾನ ಬೇಹುಗಾರಿಕೆಗೆ ಯತ್ನಿಸುತ್ತಿತ್ತು ಎನ್ನಲಾಗಿದೆ.
ಇಂಡಿಯನ್ ಸಿಮ್ ಕಾರ್ಡ್ ಬಳಸಿ ಯೋಧನನ್ನು ಜಾಲತಾಣದ ಮೂಲಕ ಸಂಪರ್ಕಿಸಿ ವಾಯುಸೇನೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಕಲೆ ಹಾಕಲು ಯತ್ನಿಸಿಲಾಗಿದೆ. ಬಂಧಿತ ಯೋಧನ ಹೆಂಡತಿಯ ಬ್ಯಾಂಕ್ ಅಕೌಂಟ್ ಗಳಲ್ಲೂ ಕೂಡ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಯೋಧನನ್ನು ಸೇನಾ ಗುಪ್ತಚರ ವಿಭಾಗದ ಅಪರಾಧ ವಿಭಾಗಕ್ಕೆ ಒಪ್ಪಿಸಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ. ಜಾಲತಾಣಗಳ ಮೂಲಕ ಭಾರತೀಯ ಯೋಧರನ್ನು ಗುರಿಯಾಗಿಸಿ ಅವರನ್ನು ಹನಿ ಟ್ರಾಪ್ ಮಾಡುವ ಮೂಲಕ ಸೂಕ್ಷ್ಮ ಮಾಹಿತಿಗಳನ್ನು ಕಲೆ ಹಾಕುವ ಪ್ರಯತ್ನಗಳು ನಡೆಯುತ್ತಿದ್ದು ಈ ಥರದ ಪ್ರಕರಣಗಳು ಹೆಚ್ಚಾಗಿವೆ.