ಕಚೇರಿಗೆ ಬಂದ ಹಿರಿಜೀವದಿಂದ ಐಎಎಸ್ ಅಧಿಕಾರಿಗೆ ಸಿಕ್ಕಿತು ಆಶೀರ್ವಾದ: ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜೀವನದಲ್ಲಿ ಹಿರಿಯ ಆಶೀರ್ವಾದವೊಂದಿದ್ದರೆ ಸಾಕು ಏನನ್ನು ಸಾದಿಸಬಹುದು ಎಂಬ ಮಾತಿದೆ. ಅದು ಯಾವುದೇ ಕೆಲಸವಾದರೂ ಸರಿ ಹಿರಿಯರು ಮಾಡುವ ಆಶೀರ್ವಾದ ಜೀವನದ್ದಕ್ಕೂ ಸದಾ ಇರುತ್ತದೆ.

ಅದೇ ರೀತಿ ಕೇರಳದ ಐಎಎಸ್ ಅಧಿಕಾರಿಯೊಬ್ಬರಿಗೆ ಅವರ ಕಚೇರಿಯಲ್ಲಿ ಹಿರಿಯ ಜೀವವೊಂದು ಹಾರೈಸಿದ್ದು, ಆ ಕ್ಷಣದ ಫೋಟೋವನ್ನು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇರಳದ ಅಲಪುಳ (Allapuzha) ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಐಎಎಸ್ ಅಧಿಕಾರಿ ಕೃಷ್ಣತೇಜ್ ಇತ್ತೀಚೆಗೆ ಟ್ವಿಟ್ಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿರುವ ಫೋಟೋ ಒಂದು ಎಲ್ಲರ ಮನಸ್ಸನ್ನ ಗೆದ್ದಿದೆ.

ಇತ್ತೀಚೆಗೆ ಕೃಷ್ಣ ತೇಜ ಅವರ ಕಚೇರಿಗೆ ಯಾವುದು ಕಾರ್ಯದ ನಿಮಿತ್ತ ಬಂದಿದ್ದ ವೃದ್ಧ ಮಹಿಳೆಯೊಬ್ಬರು ಐಎಎಸ್‌ ಅಧಿಕಾರಿಯ ತಲೆ ಮೇಲೆ ತಮ್ಮ ಕೈಗಳನ್ನಿಟ್ಟು ಆಶೀರ್ವಾದಿಸಿದ್ದಾರೆ.ಕೃಷ್ಣ ತೇಜ ಅವರು ಕೂಡಾ ಆ ಹಿರಿಯ ಮಹಿಳೆಯ ಆಶೀರ್ವಾದವನ್ನ ಪುಟ್ಟ ಮಗುವಿನಂತೆ ತಲೆಬಾಗಿ ಸ್ವೀಕರಿಸುವುದನ್ನ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ. ಈ ಟ್ವಿಟ್ಟರ್ ಪೋಸ್ಟ್ ಶೀರ್ಷಿಕೆಯಲ್ಲಿ “ಇದಕ್ಕಿಂತ ಹೆಚ್ಚಿನದ್ದು ಇನ್ನೇನು ಬೇಕು” ಅಂತ ಕೃಷ್ಣತೇಜ ಅವರು ಬರೆದುಕೊಂಡಿದ್ದಾರೆ.

ಈ ಫೋಟೋವನ್ನ ಈಗಾಗಲೇ ಅಧಿಕ ಜನರು ಶೇರ್‌ ಆಗಿದ್ದು 13 ಸಾವಿರಕ್ಕೂ ಜನರು ವೀಕ್ಷಿಸಿದ್ದಾರೆ, ಲೈಕ್ ಮಾಡಿದ್ದಾರೆ. ಅನೇಕರು ಕಾಮೆಂಟ್ ಮಾಡಿ ತಮ್ಮ ಭಾವನೆಯನ್ನ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಒಬ್ಬರು ‘ಇದೊಂದು ಅಪರೂಪದ ದೃಶ್ಯ, ಈ ರೀತಿಯ ನಿಷ್ಕಲ್ಮಶ ಹೃದಯದ ಆಶೀರ್ವಾದ ಪಡೆಯುವುದಕ್ಕೆ ನೀವು ಪುಣ್ಯ ಮಾಡಿದ್ದಿರಾ ಎಂದು ಕಾಮೆಂಟ್ ಮಾಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!