ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಕ್ ನ ಅಂತಾರಾಷ್ಟ್ರೀಯ ಸಂಸ್ಥೆ ಐಬಿಎಂ ಕೂಡ ರಷ್ಯಾ ಮೇಲೆ ತನ್ನ ನಿರ್ಬಂಧಗಳನ್ನು ವಿಧಿಸಿದ್ದು, ರಷ್ಯಾದೊಂದಿಗೆ ತನ್ನೆಲ್ಲಾ ವ್ಯವಹಾರಗಳನ್ನು ಸ್ಥಗಿತಗೊಳಿಸಿದೆ ಎಂದ ಸಂಸ್ಥೆಯ ಸಿಇಒ ಅರವಿಂದ್ ಕೃಷ್ಣ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣೆಯಲ್ಲಿ ತಿಳಿಸಿದ ಅವರು, ಉಕ್ರೇನ್ ಮೇಲಿನ ಯುದ್ಧದ ಕುರಿತು ಕಳೆದ ಹಲವಾರು ದಿನಗಳಿಂದ ಸಾಕಷ್ಟು ಅಭಿಪ್ರಾಯಗಳನ್ನು ಪಡೆದಿದ್ದೇವೆ. ರಷ್ಯಾದಲ್ಲಿ ನಮ್ಮ ಎಲ್ಲಾ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದೇವೆ. ಅಲ್ಲಿನ ನಮ್ಮ ಸಹೋದ್ಯೋಗಿಗಳಿಗೆ ನಮ್ಮಿಂದ ಅಗತ್ಯ ಬೆಂಬಲ ನೀಡಲಾಗುತ್ತದೆ. ಈ ಕುರಿತು ಶೀಘ್ರದಲ್ಲಿ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದ್ದೇವೆ ಎಂದರು.
ನೆಟ್ ಫ್ಲಿಕ್ಸ್, ಮೈಕ್ರೋ ಸಾಫ್ಟ್, ಗೂಗಲ್, ಟ್ವಿಟರ್, ಹೋಂಡಾ, ಆಪಲ್, ಮೆಟಾ, ಫೇಸ್ ಬುಕ್, ಸ್ಯಾಮ್ ಸಂಗ್, ವೀಸಾ ಹಾಗೂ ಮಾಸ್ಟರ್ ಕಾರ್ಡ್ ಸೇರಿದಂತೆ ಸಾಕಷ್ಟು ಸಂಸ್ಥೆಗಳು ಉಕ್ರೇನ್ ವಿರುದ್ಧದ ದಾಳಿ ಖಂಡಿಸಿ ರಷ್ಯಾ ಗೆ ನಿರ್ಬಂಧಗಳನ್ನು ಹೇರಿವೆ.
ಯುದ್ಧ ಪ್ರಾರಂಭವಾದ ಎರಡು ವಾರ ಕಳೆಯುವುದರಲ್ಲಿ ರಷ್ಯಾದಲ್ಲಿನ ಮಾಧ್ಯಮ ಸಂಸ್ಥೆಗಳು, ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಬ್ರೇಕ್ ಹಾಕಲಾಗಿದೆ.