ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾವು (ಐಸಿಎಐ) ಚಾರ್ಟರ್ಡ್ ಅಕೌಂಟೆನ್ಸಿ ಅಂತಿಮ ಪರೀಕ್ಷೆ ಮತ್ತು ಇಂಟರ್ ಫೈನಲ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟ ಮಾಡಿದೆ. ಸಿಎ ಪರೀಕ್ಷೆಯಲ್ಲಿ ಅಹ್ಮದಾಬಾದ್‌ನ ಅಕ್ಷಯ ರಮೇಶ್ ಜೈನ್ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಕಲ್ಪೇಶ್ ಜೂನ್ ಜಿ, ಪ್ರಖಾರ್ ವರ್ಷ್ಣಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಸಿಎ ಇಂಟರ್ ಪರೀಕ್ಷೆಯಲ್ಲಿ ವೈ ಗೋಕುಲ್ ಸಾಯಿ ಶ್ರೀಕಾರ್ ಮೊದಲ ರ್ಯಾಂಕ್ ಪಡೆದಿದ್ದರೆ, ನೂರ್ ಸಿಂಗ್ಲಾ ಮತ್ತು ಕಾವ್ಯ ಸಂದೀಪ್ ಕೊಠಾರಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಪರೀಕ್ಷೆ ಬರೆದ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ರೋಲ್ ನಂಬರ್, ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.
ಸಿಎ ಅಂತಿಮ (ಗುಂಪು 1) ಪರೀಕ್ಷೆಗಳು ಮೇ 2 ರಿಂದ 9 ರವರೆಗೆ ನಡೆದರೆ, ಅಂತಿಮ (ಗುಂಪು 2) ಮೇ 11 ರಿಂದ 17 ರವರೆಗೆ ನಡೆದವು. ಸಿಎ ಇಂಟರ್ಮೀಡಿಯೇಟ್ (ಗುಂಪು 1) ಮೇ 3 ರಿಂದ 10 ರವರೆಗೆ ಮತ್ತು ಇಂಟರ್ (ಗುಂಪು 2) ) ಮೇ 12 ರಿಂದ 18, 2023 ರವರೆಗೆ ನಡೆದಿತ್ತು.