ಹೊಸಗಂತ ಡಿಜಿಟಲ್ ಡೆಸ್ಕ್
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್ನ ಸೂಪರ್ 12 ಹಂತದ ಮೊದಲ ಪಂದ್ಯದಲ್ಲೇ ಪ್ರಶಸ್ತಿ ಗೆಲ್ಲುವ ಫೆವರೆಟ್, ಆತಿಥೇಯ ರಾಷ್ಟ್ರ ಆಸ್ಟ್ರೇಲಿಯಾ ಮುಗ್ಗರಿಸಿದೆ. ನ್ಯೂಜಿಲೆಂಡ್ ವಿರುದ್ಧ 201 ರನ್ ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಆಸಿಸ್ ಕೇವಲ 111 ರನ್ ಗಳಿಗೆ ಸರ್ವಪತನಗೊಳ್ಳುವುದರೊಂದಿಗೆ 89 ರನ್ ಗಳ ಭಾರೀ ಸೋಲು ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಂಗ್ ಗೆ ಇಳಿದ ನ್ಯೂಜಿಲೆಂಡ್ ಬ್ಯಾಟರ್ ಗಳು ಅದ್ಭುತ ಆಟ ಪ್ರದರ್ಶಿಸಿದರು.
ಕಿವೀಸ್ ಓಪನರ್ ಗಳು ಸ್ಪೋಟಕ ಬ್ಯಾಟಿಂಗ್ ಮೂಲಕ ಬೌಲರ್ ಗಳನ್ನು ಕಂಗೆಡಿಸಿದರು. ಆರಂಭಿಕ ಡ್ವೆನ್ ಕಾನ್ವೆ ಕೇವಲ 58 ಎಸೆತಗಳಲ್ಲಿ 7 ಫೋರ್, 2 ಸಿಕ್ಸರ್ನೊಂದಿಗೆ ಅಜೇಯ 92 ರನ್ ಸಿಡಿಸಿ ಆಸಿಸ್ ಬೌಲರ್ ಗಳ ಬೆವರಿಳಿಸಿದರು. ಕಿವೀಸ್ ಮತ್ತೊಬ್ಬ ಆರಂಭಿಕ ಫಿನ್ ಅಲೆನ್ ಸಹ ಕೇವಲ 16 ಎಸೆತಗಳಲ್ಲಿ 5 ಫೋರ್, 3 ಸಿಕ್ಸರ್ ಗಳಿದ್ದ 42 ರನ್ ಗಳ ವಿಧ್ವಂಸಕ ಬ್ಯಾಟಿಂಗ್ ನಡೆಸಿದರು. ಅಂತಿಮ ಹಂತದಲ್ಲಿ ಸಿಡಿದ ಜೇಮ್ಸ್ ನೀಶಮ್ 13 ಎಸೆತಗಳಲ್ಲಿ 26 ರನ್ ಕಲೆಹಾಕಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಆಸ್ಟ್ರೇಲಿಯಾ ಪರ ಜೋಶ್ ಹ್ಯಾಜ್ಲೆವುಡ್ 2 ವಿಕೆಟ್ ಕಬಳಿಸಿದರೆ, ಆ್ಯಡಂ ಝಂಪಾ 1 ವಿಕೆಟ್ ಪಡೆದರು. 4 ಓವರ್ಗೆ 46 ರನ್ ನೀಡಿದ ಪ್ಯಾಟ್ ಕಮಿನ್ಸ್ ದುಬಾರಿ ಎನಿಸಿಕೊಂಡರು ಗುರಿ ಬೆನ್ನತ್ತಿದ್ದ ಆಸಿಸ್ ಸತತವಾಗಿ ವಿಕೆಟ್ ಕಳೆದುಕೊಂಡು ಅಘಾತಕ್ಕೆ ಒಳಗಾಯಿತು. ಕಾಂಗರೂಗಳ ಆರಂಭಿಕರಾದ ಫಿಂಚ್ 13, ವಾರ್ನರ್ 5, ಮಾರ್ಷ್ 16, ಸ್ಟೋಯ್ನಿಸ್ 7, ಡೇವಿಡ್ 11, ವೇಡ್ 2 ರನ್ ಗಳಿಸಿ ಹೀನಾಯ ಪ್ರದರ್ಶ ತೋರಿದರು. ಇನೊಂದೆಡೆ ಗ್ಲೇನ್ ಮ್ಯಾಕ್ಸ್ ವೆಲ್ 28 ರನ್ ಗಳಿಸಿ ಕಿವೀಸ್ ಬೌಲರ್ ಗಳಿಗೆ ಕೊಂಚ ಪ್ರತಿರೋಧ ತೋರಿದರು.
ನ್ಯೂಜಿಲೆಂಡ್ ಪರ ಸೌಥಿ, ಸ್ಯಾಂಟ್ನರ್ ತಲಾ 3, ಬೋಲ್ಟ್ 2 ವಿಕೆಟ್ ಕಬಳಿಸಿದರು. ಈ ಜಯದ ಮೂಲಕ ನ್ಯೂಜಿಲೆಂಡ್ ಕಳೆದ ಪೈನಲ್ ನಲ್ಲಿ ಎದುರಾಗಿದ್ದ ಸೋಲಿಗೆ ಭರ್ಜರಿ ಮುಯ್ಯಿ ತೀರಿಸಿಕೊಂಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ