ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ನೂತನ ಱಂಕಿಂಗ್ ಪಟ್ಟಿ ರಿಲೀಸ್ ಮಾಡಿದ್ದು, ಟೀಮ್ ಇಂಡಿಯಾದ ನಾಲ್ವರು ಪ್ಲೇಯರ್ಸ್ ಟಾಪ್ 10 ಒಳಗೆ ಸ್ಥಾನ ಪಡೆದುಕೊಂಡಿದ್ದಾರೆ.
ಇಂಗ್ಲೆಂಡ್ ಸರಣಿಯ ಬಳಿಕ ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲೂ ಶೈನಿಂಗ್ ಪರ್ಫಾಮೆನ್ಸ್ ನೀಡ್ತಿರೋ ಶುಭ್ಮನ್ ನಂಬರ್ 1 ಪಟ್ಟ ಭದ್ರ ಪಡಿಸಿಕೊಂಡಿದ್ದಾರೆ. ಬರೋಬ್ಬರಿ 817ರ ರೇಟಿಂಗ್ನೊಂದಿಗೆ ಮೊದಲ ಸ್ಥಾನ ಭದ್ರಪಡಿಸಿದ್ದಾರೆ.
ಇನ್ನು ಕ್ಯಾಪ್ಟನ್ ರೋಹಿತ್ 3ನೇ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ರನ್ಗಳಿಕೆಗೆ ಪರದಾಡ್ತಿದ್ದ ಕೊಹ್ಲಿ ಕೊನೆಗೂ ರೈಟ್ ಟ್ರ್ಯಾಕ್ಗೆ ಮರಳಿದ್ದಾರೆ. ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ರಿಧಮ್ ಕಂಡುಕೊಂಡ ಕೊಹ್ಲಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. 5ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
ಟೀಮ್ ಇಂಡಿಯಾದ ಮಿಡಲ್ ಆರ್ಡರ್ ಪಿಲ್ಲರ್ ಶ್ರೇಯಸ್ ಅಯ್ಯರ್ ಬ್ಯಾಟ್ ಸಖತ್ ಸದ್ದು ಮಾಡ್ತಿದೆ. ಏಕದಿನ ಫಾರ್ಮೆಟ್ನಲ್ಲಿ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ 4ನೇ ಕ್ರಮಾಂಕದ ಪಿಲ್ಲರ್ ಆಗಿದ್ದಾರೆ. 9ನೇ ಸ್ಥಾನ ಪಡೆದಿದ್ದಾರೆ.
ಬೌಲಿಂಗ್ನಲ್ಲೂ ಕುಲ್ದೀಪ್ ಯಾದವ್ ಟಾಪ್ 5 ಅಲ್ಲಿ ಕಾಣಿಸಿಕೊಂಡಿದ್ದಾರೆ. ಆಲ್ರೌಂಡರ್ನಲ್ಲಿ ರವೀಂದ್ರ ಜಡೇಜಾ 400 ಅಂಕಗಳಿಂದ ಪ್ರಥಮ ಸ್ಥಾನದಲ್ಲಿದ್ದಾರೆ. ಬೌಲಿಂಗ್ನಲ್ಲಿ 908 ಅಂಕಗಳಿಂದ ಜಸ್ಪ್ರಿತ್ ಬೂಮ್ರಾ ನಂಬರ್- 1 ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ. ಏಕದಿನದಲ್ಲಿ ಟೀಮ್ ಇಂಡಿಯಾ ನಂಬರ್ 1 ಆಗಿದ್ರೆ, ಆಟಗಾರರೆಲ್ಲಾ ಟಾಪ್ ಸ್ಥಾನಗಳಲ್ಲಿ ಉಳಿದಿದ್ದಾರೆ.